ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 46/2021 ಕಲಂ: 379 IPC.

               ಶಿದ್ದಲಿಂಗಪ್ಪ ಶಿವನಂದಪ್ಪ ಪಟ್ಟಣದ ಸಾ|| ಚನ್ನೂರ ಇವರ ಬಾಬತ್ 2013 ರ ಮಾಡೆಲ್ನ Splendor Plus ಕಂಪನಿಯ Grey Black ಬಣ್ಣದ  ಮೋಟರ್ ಸೈಕಲ್ಲ ನಂಬರ KA-27/EA9016 ಚೆಸ್ಸಿ ನಂ- MBLHA10AMDHA46065 ಮತ್ತು ಇಂಜೆನ್ ನಂಬರ HA10EJDHA35863 ಅಃಕಿಃ 30,000/- ರೂ ನೇದ್ದನ್ನು ಹಾವೇರಿಯ ಹಂದ್ರಾಳ ಆಸ್ಪತ್ರೆಯ ಎದುರುಗಡೆಯ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದನ್ನು ದಿನಾಂಕ: 15-04-2021 ಮದ್ಯಾಹ್ನ 03-15 ಘಂಟೆಯಿಂದ 5-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು  ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 97/2021 ಕಲಂ: 506, 498A, 504, 323, 324 IPC.

           ಶೇಖಪ್ಪ ಹೆಗ್ಗಪ್ಪ ಬಂಕಾಪೂರ ಸಾ|| ಸವಣೂರ ಹಾಗೂ ದೇವಕ್ಕ ಸೆಟ್ಟೆಪ್ಪ ಬಂಕಾಪೂರ ಇವರಿಬ್ಬರು ಮದುವೆಯಾದ ನಂತರ ಸುಮಾರು ನಾಲ್ಕೈದು ವರ್ಷಗಳ ಕಾಲ ಚನ್ನಾಗಿ ಬಾಳ್ವೆ ಮಾಡಿ ದೇವಕ್ಕ ಇವರ ಮೇಲೆ ವಿನಾಃಕಾರಣ ಅನೈತಿಕ ಸಂಬಂಧ ಕಟ್ಟಿ ಅವರಿಗೆ ಅವಾಚ್ಯವಾಗಿಬೈದಾಡುತ್ತಾ ಹೊಡಿಬಡಿ ಮಾಡುತ್ತಾ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತ ಬಂದಿದ್ದು ಇದರಿಂದ ಬೇಸತ್ತ ಪಿರ್ಯಾದಿದಾರಳು ತನ್ನ ಗಂಡನ ಮನೆಯನ್ನು ಬಿಟ್ಟು ಸವಣೂರಿನ ತಮ್ಮ ತವರುಮನೆಯಲ್ಲಿ ಇರುವಾಗಲೂ ಸಹ ಅಲ್ಲಿಗೂ ಬಂದು ಹೊಡಿಬಡಿ ಮಾಡುತ್ತಾ ಕಿರುಕುಳ ಮುಂದುವರೆಸಿದ್ದು ಅಲ್ಲದೇ ದಿನಾಂಕ: 04-05-2021 ರಂದು ಸಂಜೆ 7-00 ಗಂಟೆ ಸುಮಾರಿಗೆ ತವರುಮನೆಗೆ ಬಂದು ಲೇ ಹಾದರಗಿತ್ತಿ, ಬೆಂಡ್ಲಿ ನನಗೆ ಸೆರೆ ಕುಡಿಯಲು ರೊಕ್ಕ ಕೊಡು ಅಂತಾ ಕೇಳಿದ್ದು, ಕೊಡೊದಿಲ್ಲ ಅಂದಿದ್ದಕ್ಕೆ ತನ್ನ ಹತ್ತಿರ ಇದ್ದ ಒಂದು ಟವಲ್ದಲ್ಲಿ ಒಡೆದ ಇಟ್ಟಿಗೆಯನ್ನು ಕಟ್ಟಿ ಅದರಿಂದ ಮೈಕೈಗೆ ಹೊಡೆದು ನಂತರ ತಲೆಗೆ ಹೊಡೆದು ದುಃಖಾಪತ್ ಪಡಿಸಿದ್ದು, ಬಿಡಿಸಿಕೊಳ್ಳಲು ಹೋದ ಪಿರ್ಯಾದಿದಾರಳ ಮಹದೇವಪ್ಪ ಇವರಿಗೂ ಸಹ ಕೈಯಿಂದ ದೂಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಇನ್ನೊಮ್ಮೆ ನೀನು ಒಬ್ಬಳೆ ಸಿಕ್ಕರೇ ನಿನ್ನ ಇದೇ ಮನ್ಯಾಗ ಕೊಂದು ಹೂತು ಹಾಕ್ತಿನಿ ಲೇ ಬೋಸುಡಿ, ರಂಡಿ ಅಂತಾ ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಿರೇಕೆರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 09/2021 ವ್ಯಕ್ತಿ ಸಾವು.

           ಗಣೇಶ @ ಜ್ಞಾನೇಶ ತಂದೆ ಹೇಮಣ್ಣ ಪೂಜಾರ ವಯಾ: 38 ವರ್ಷ, ಜಾತಿ: ಹಿಂದೂ ಲಿಂಗಾಯಿತ, ಉದ್ಯೋಗ: ಹಮಾಲಿಕೆಲಸ, ಸಾ: ಅರಳಿಕಟ್ಟಿ, ತಾ: ಹಿರೇಕೆರೂರ ಈತನ ತಾಯಿ ಶಾಂತಾ ಇವರು ಸುಮಾರು 25 ವರ್ಷಗಳ ಹಿಂದೆ ತೀರಿಕೊಂಡ ನಂತರ ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿ ಹಮಾಲಿ ಹಾಗೂ ಕೂಲಿಕೆಲಸ ಮಾಡಿಕೊಂಡು ಇದ್ದು ಅದರಿಂದ ಬಂದ ಹಣದಲ್ಲಿ ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಬಿದ್ದು ಅದನ್ನು ಬಿಡಲಿಕ್ಕೆ ಆಗದೇ ಅದನ್ನೆ ಮಾನಸಿಕ ಮಾಡಿಕೊಂಡು ಯಾವದೋ ಕಾರಣಕ್ಕೆ ಎಲ್ಲಿಯೋ ಹೋಗಿ ಯಾವದೋ ವಿಷ ಪದಾರ್ಥ ಸೇವೆನೆ ಮಾಡಿ ಮಾಸೂರು ಸರ್ಕಾರಿ ಆಸ್ಪತ್ರೆಗೆ ತೋರಿಸಿಕೊಳ್ಳಲು ಅಂತಾ ಬಂದು ದಿನಾಂಕ: 04/05/2021 ರಂದು 17-30 ಗಂಟೆಗೆ ದಾಖಲಾದಾಗ ಉಪಚಾರ ಫಲಕಾರಿಯಾಗದೇ ಮೃತಪಟ್ಟಿದ್ದು ಮೃತನ ಸಾವಿನಲ್ಲಿ ಯಾವದೇ ಸಂಶಯವಿರುವದಿಲ್ಲ ಅಂತಾ ಗಿರಿಜಮ್ಮಾ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 20/2021 ವ್ಯಕ್ತಿ ಸಾವು.

           ಬಸನಗೌಡ ತಂದೆ ಮುರಡನಗೌಡ ಪಾಟೀಲ ವಯಾ- 22 ವರ್ಷ. ಸಾ-ಗುಮ್ಮನಹಳ್ಳಿ ತಾ-ಬ್ಯಾಡಗಿ ಈತನು ತಮ್ಮ ಹೊಲಕ್ಕೆ ಸಂಜೆ 04-00 ಘಂಟೆ ಸುಮಾರಿಗೆಹೋಗಿ ಮಡಿಹುಲ್ಲು ತೆಗೆಯಲು ತೋಟದಲ್ಲಿದ್ದ ಕರೆಂಟಿನ ಮನೆಯಲ್ಲಿ ಖುರ್ಚಿಗೆ ತರಲು ಹೋದಾಗ ಮಳೆಯಾಗಿದ್ದರಿಂದ ಭೂಮಿ ತಂಪಾಗಿದ್ದು ವಿದ್ಯುತ್ತ್ ಬೋರಿನ ಬೋರ್ಡಿನಿಂದ ನೆಲಕ್ಕೆ ವಿದ್ಯುತ್ತ್ ಗ್ರೌಂಡ್ ಆಗಿ ಆಕಸ್ಮಿಕವಾ್ಗಿ ವಿದ್ಯುತ್ತ ಮೃತನಿಗೆ  ತಗಲಿ ಸ್ಥಳದಲ್ಲಿಯೇ ಮರಣ ಹೊಂದಿದ್ದು, ನನ್ನ ಮಗನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವದಿಲ್ಲ ಅಂತಾ ಮೃತನ ತಂದೆ ವರದಿ  ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 06-05-2021 01:51 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ