ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:142/2021 ಕಲಂ: 279,337,338,304(A) IPC.

                     ಮಹ್ಮದಹುಸೇನ ತಂದೆ ಅಬ್ದುಲ್ರಜಾಕ ತಟ್ಟಿ. ವಯಾ:34 ಜಾತಿ:ಮುಸ್ಲಿಂ ಉದ್ಯೋಗ:ಕೂಲಿ ಸಾ||ಅಕ್ಕಿಆಲೂರ. ತಾ||ಹಾನಗಲ್ಲ. ಇವನು ದಿನಾಂಕ: 04-09-2021 ರಂದು ಮುಂಜಾನೆ 09-00 ಘಂಟೆ ಸುಮಾರಿಗೆ ಹಾನಗಲ್ಲ-ಶಿವಮೊಗ್ಗ ರಸ್ತೆ ಗೊಂದಿ ಗ್ರಾಮದ ಕ್ರಾಸ್ ಹತ್ತೀರ ರಸ್ತೆಯ ಎಡ ಬದಿಗೆ ತನ್ನ ಮೋಟಾರ್ಸೈಕಲ್ ನಂಬರ ಕೆಎ-15 ಕ್ಯೂ-6724 ನೇದ್ದರ ಹಿಂಬದಿಯಲ್ಲಿ ಗಾಯಾಳು ರೋಷನಜಮೀರ ಇವನಿಗೆ ಕೂರಿಸಿಕೊಂಡು ಆನವಟ್ಟಿ ಕಡೆಯಿಂದ ಅಕ್ಕಿಆಲೂರ ಕಡೆಗೆ ಬರುತ್ತಿರುವಾಗ ಹಾನಗಲ್ಲ ಕಡಯಿಂದ ಬಂದಂತಹ ಮೋಟಾರ ಸೈಕಲ್ ನಂಬರ: ಕೆಎ-27 ಇಎಮ್-3654 ನೇದ್ದರ ಸವಾರ ಹನುಮಂತಪ್ಪ ತಂದೆ ಭೀಮಪ್ಪ ಹೋಳಿಬೈಲ್. ಸಾ-ಕಂಚೀನೆಗಳೂರ ಇವನು ತನ್ನ ಮೋಟಾರ್ ಸೈಕಲ್ ಹಿಂದುಗಡೆ ಶಿವಾನಂದ ಇವನಿಗೆ ಕೂರಿಸಿಕೊಂಡು ಅತೀ ವೇಗವಾಗಿ ನೀರ್ಲಕ್ಷತನದಿಂದ ಮೋಟಾರ್ ಸೈಕಲ್ ಅನ್ನು ಚಲಾಯಿಸಿಕೊಂಡು ಹೋಗಿ ಮಹ್ಮದಹುಸೇನ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ಗೆ ಡಿಕ್ಕಿ ಪಡಿಸಿ ತನಗೆ ಕೈ ಹತ್ತೀರ ಬಲವಾದ ಪೆಟ್ಟು ಆಗುವಂತೆ ಮಾಡಿಕೊಂಡು ಶಿವಾನಂದ ಹಾಗೂ ರೋಷನಜಮೀರ ಇವರಿಗೆ ದೇಹದ ಮೇಲೆ ಸಣ್ಣಪುಟ್ಟ ಗಾಯ ನೋವೂಗಳು ಆಗುವಂತೆ ಮಾಡಿದ್ದು ಅಲ್ಲದೆ ಮಹ್ಮದಹುಸೇನ ಇವನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದು ಚಿಕಿತ್ಸೆಗಾಗಿ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೀರುವಾಗ ದಾರಿ ಮಧ್ಯ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ  ಸಂಖ್ಯೆ:23/2021 ಮಹಿಳೆ ಸಾವು.

                     ಹಾಲಮ್ಮ ಕೊಂ ಶಂಬಣ್ಣ ಪವಾಡಿ ವಯಾ: 42 ವರ್ಷ,  ಸಾ: ವರ್ದಿ ತಾ|| ಹಾನಗಲ್ಲ ಇವಳು ತನಗಿದ್ದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು. ದಿನಾಂಕ: 30-08-2021 ರಂದು ಮುಂಜಾನೆ 9-00 ಗಂಟೆಗೆ ವರ್ದಿ ಗ್ರಾಮದ ವರದಾ ನದಿ ದಂಡೆಯ ಸಮೀಪ ಇರುವ ತಮ್ಮ ಜಮೀನಿಗೆ ಹೋಗಿದ್ದು. ನಂತರ ಮದ್ಯಾಹ್ನ 3-00 ಗಂಟೆ ಸುಮಾರಿಗೆ ತಮ್ಮ ಹೊಲಕ್ಕೆ ಹೋಗಿ ತಿ ಹಾಲಮ್ಮ ಇವಳಿಗೆ ನೋಡಲು ಹಾಲಮ್ಮ ಇವಳು ಇರಲಿಲ್ಲ. ನಂತರ 2 - 3 ದಿವಸ ಹುಡುಕಿದರೂ ಸಹ ಸಿಗದೇ ಇದ್ದುದರಿಂದ ಆಡೂರ ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿ ಕಾಣೆಯಾಗಿರುತ್ತಾಳೆ ಅಂತಾ ದೂರು ನೀಡಿದ್ದು. ದಿನಾಂಕ: 04-09-2021 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಕುಣಿಮೆಳ್ಳಿಹಳ್ಳಿ ಗ್ರಾಮದ ಶೇಖಪ್ಪ ರಾಮಣ್ಣ ಸುಳ್ಳಳ್ಳಿ ಇವರ ಹೊಲದ ಬಾಜು ಇರುವ ವರದಾ ನದಿಯಲ್ಲಿ ಮಹಿಳೆ ಶವ ತೇಲಿ ಬಂದಿರುತ್ತದೆ ಅಂತಾ ಕೇಳಿ ತಿಳಿದು ಸ್ಥಳಕ್ಕೆ ಬಂದು ನೋಡಿದ್ದು ಇದರಲ್ಲಿ ಮೃತಳು ತನ್ನ ಹೆಂಡತಿಯೇ ಇರುತ್ತಾಳೆ ಇವಳು ತನಗಿದ್ದ ಮಾನಸಿಕ ಖಾಯಿಲೆಯಿಂದ ಬಳಲಿ ದಿನಾಂಕ: 30-08-2021 ರಂದು ಮುಂಜಾನೆ 9-00 ಗಂಟೆಯಿಂದ ದಿನಾಂಕ: 04-09-2021 ರಂದು ಬೆಳಗಿನ 9-30 ಗಂಟೆ ನಡುವಿನ ಅವಧಿಯಲ್ಲಿ ವರದಾ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ನೀರು ಕುಡಿದು ಮೃತ ಪಟ್ಟಿದ್ದು ಇವಳ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲ ಅಂತಾ ಮೃತಳ ಗಂಡ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 13-09-2021 11:24 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ