ಅಭಿಪ್ರಾಯ / ಸಲಹೆಗಳು

ತಡಸ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:64/2021 ಕಲಂ: 201,302 IPC.

            ತಡಸ ಪೊಲೀಸ ಠಾಣಾ ಹದ್ದಿಯ ಪೈಕಿ ಕೃಷಿ ನಗರದಿಂದ ಬಿಶೆಟ್ಟಿಕೊಪ್ಪಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಗಂಗಾಧರ ಮಹದೇವಪ್ಪ ಜಾಧವ ಸಾ: ಹುಲಸೋಗಿ ಇವರ ಜಮೀನದ ಹತ್ತಿರ ಕಾಲುವೆಯಲ್ಲಿ ದಿನಾಂಕ: 04/08/2021 ರಂದು ಮುಂಜಾನೆ 10-00 ಘಂಟೆಯಿಂದ ಸಂಜೆ 4-00 ಘಂಟೆ ನಡುವಿನ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಉಮೇಶ ತಂದೆ ವೀರುಪಾಕ್ಷಪ್ಪ ನಂದೆಣ್ಣವರ, ವಯಾ-32 ವರ್ಷ,ಸಾ: ಚಿಕ್ಕಬೆಂಡಿಗೇರಿ, ತಾ: ಶಿಗ್ಗಾಂವ, ಈತನಿಗೆ ಯಾವುದೋ ದುರುದ್ದೇಶದಿಂದ ಮುಖ ಹಾಗೂ ಇತರೆ ಕಡೆಗೆ ಹೋಡೆದು, ಹಗ್ಗದಿಂದ ಕುತ್ತಿಗೆಗೆ ಬಿಗಿದು, ಕೊಲೆ ಮಾಡಿ ತಂದು ಎಸೆದು ಹೋಗಿದ್ದು, ಚಿಕ್ಕಬೆಂಡಿಗೇರಿ ಗ್ರಾಮದ ಚನಬಸನಗೌಡ ಜಂಪನಗೌಡ ಪಾಟೀಲ, ಹಾಗೂ ಇತರರು ಸೇರಿ ಅಪರಾಧ ಎಸಗಿರಬಹುದು ಎಂದು ರುದ್ರವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಸಿ ಇ ಎನ್‌  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:63/2021 ಕಲಂ: INFORMATION TECHNOL OGY ACT  2008 (U/s-66(C),66(D)); 420 IPC.

            ಅಭೀಷೇಕ್ ನಾಯಕ್ ಎಂಬುವವನು ಬಂಗಾರೆಪ್ಪ ಮಾರ್ತಾಂಡಪ್ಪ ಮಾರನಬೀಡ ಸಾ|| ಯಳ್ಳೂರ ಇವರಿಗೆ ಪೋನ್ ಮಾಡಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಲೋನ ಕೊಡುವುದಾಗಿ ನಂಬಿಸಿ, ಲೋನ್ ಅಗ್ರಿಮೆಂಟ ಹಣ ಅಂತಾ  ರೂ.6400/-,ಮಾರ್ಕೆಟಿಂಗ್ ವ್ಯಾಲ್ಯೂ ಹಣ ಅಂತಾ ರೂ.16,333/-, ಬಜಾಜ್ ಇನ್ಸೂರೆನ್ಸ್ ಬಾಂಡ ಮಾಡಿಸಲು ರೂ. 18300/-, ಜಿ.ಎಸ್.ಟಿ ಹಣ ಅಂತಾ ರೂ. 9000/- ಜಿ.ಎಸ್.ಟಿ ಟ್ಯಾಕ್ಸ ಅಂತಾ ರೂ.  18000/-, ಮ್ಯಾನೇಜರ ಕಮಿಶನ್ ಹಣ ಅಂತಾ ರೂ. 20,000/-, ಎಂಪ್ಲಾಯರ ಎಕ್ಸಪೆಂಡಿಚರ ಚಾರ್ಜ ಹಣ ಅಂತಾ ರೂ.11,000/-, ಅಕೌಂಟ ಲಾಕರ್ ಚಾರ್ಜಸ ಹಣ ಅಂತಾ ರೂ.68,000/- ಹಾಗೂ ಸಿವ್ಹಿಲ್ ಕ್ಲಿಯರನ್ಸ ಚಾರ್ಜ ಹಣ ಅಂತಾ ರೂ. 18,000/-ಗಳು, ಹೀಗೆ ಒಟ್ಟು ರೂ. 1,85,033/-ಗಳನ್ನು ಅಭೀಶೆಕ ತನ್ನ IDFC BANK A/c.No.10065513184, IFSC; IDFB0080331 ಗೆ Karnataka Bank Ltd, A/c. No. 3022500102216001, IFSC: KARB0000302 ಖಾತೆಯಿಂದ Phonepe No. 9731791106  ಮೂಲಕ ಹಣ ಹಾಕಿಸಿಕೊಂಡು ಮೋಸಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:82/2021 ಕಲಂ: 379 IPC.

            ದಿನಾಂಕ 04-08-2021 ರಂದು ಮಧ್ಯಾಹ್ನ 03-00 ಗಂಟೆಗೆ ಗುತ್ತಲ ಪಿಎಸ್‌ಐ ರವರಿಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಜನರು ಹಾಗೂ ಪಂಚರಿಗೆ ಕರೆದುಕೊಂಡು ಹರಳಹಳ್ಳಿ ಗ್ರಾಮದ ಸಮೀಪ ಸೋಮೇಶ್ವರ ದೇವಸ್ಥಾನದ ಹತ್ತಿರ ಇರುವ ತುಂಗಭದ್ರಾ ನದಿ ಪಾತ್ರಕ್ಕೆ ಮದ್ಯಾಹ್ನ 03-35 ಗಂಟೆಗೆ ಹೋಗಿ ದಾಳಿ ಮಾಡಿದ ಕಾಲಕ್ಕೆ ಸುರೇಶ ಪರಸಪ್ಪ ಹರಿಜನ ಸಾ|| ಹರಳಳ್ಳಿ ಹಾಗೂ ಸಹಚರರು ಸೇರಿ ನದಿಯ ಪಾತ್ರದಲ್ಲಿಂದ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತೆಗೆದು ದಾಸ್ತಾನು ಮಾಡುತ್ತಿದ್ದು ಪೊಲೀಸ್ ಜೀಪನ್ನು ನೋಡಿ ಓಡಿ ಹೋಗಿದ್ದು ಇರುತ್ತದೆ. ದಾಳಿ ಮಾಡಿದ ಕಾಲಕ್ಕೆ ಒಂದು ಟ್ರ್ಯಾಕ್ಟರ (ಸುಮಾರು 2 ಕ್ಯೂಬಿಕ ಮೀಟರ) ನಷ್ಟು ಮರಳು ಅಕಿ 1800 ರೂ/- ವಶ ಪಡಿಸಿಕೊಂಡಿದ್ದು ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 12-08-2021 05:44 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ