ಅಭಿಪ್ರಾಯ / ಸಲಹೆಗಳು

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:66/2021 ಕಲಂ: 279,304(A) IPC.

              ಪರಸಪ್ಪ ವಿರುಪಾಕ್ಷಪ್ಪ ಗಾಣಿಗಾರ ಸಾ|| ಬಸಾಪೂರ  ಇವರು ದಿನಾಂಕ:30-06-2021 ರಂದು ಸಾಯಂಕಾಲ 06.00 ಗಂಟೆ ಸುಮಾರಿಗೆ ತನ್ನ ಮೊಟರ್ ಸೈಕಲ್ ನಂ: ಕೆಎ26 ಎಕ್ಸ್ 9086 ನೇದ್ದರಲ್ಲಿ ತನ್ನ ಹೆಂಡ್ತಿ ಮಂಜವ್ವಳಿಗೆ ಕೂಡ್ರಿಸಿಕೊಂಡು ಹುನಗುಂದ- ಬಂಕಾಪೂರ ರಸ್ತೆಯ ಮೇಲೆ ಹುಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆ ಹತ್ತಿರ ಅತೀ ಜೋರಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿನ ತಗ್ಗು ನೋಡಿ ಒಮ್ಮೇಲೆ ಬ್ರೇಕ್ ಹಾಕಿದ್ದು ಹಿಂದೆ ಕುಳಿತ ಮಂಜವ್ವ ರಸ್ತೆಯ ಮೇಲೆ ಪುಟ್ಟಿದು ಬಿಳುವಂತೆ ಮಾಡಿ ತಲೆಯ ಬಲಗಡೆಗೆ ಗಾಯ ಪಡಿಸಿ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸುತ್ತಿದ್ದಾಗ ದಿನಾಂಕ: 04-07-2021 ರಂದು ಬೆಳಿಗ್ಗೆ 07.00 ಗಂಟೆಗೆ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:92/2021 ಕಲಂ: 380, 457 IPC.

              ಈರಣ್ಣಾ ಶಿವಪ್ಪ ತೊಂಡುರ ಸಾ|| ಹುಲಗೂರ ದಿನಾಂಕ : 03-07-2021 ರಂದು ರಾತ್ರಿ 08.00 ಗಂಟೆಯಿಂದ ದಿನಾಂಕ : 04-07-2021 ರ ಬೆಳಗಿನ ಜಾವ 06.00 ಗಂಟೆಯ ನಡುವಿನ ಅವದಿಯಲ್ಲಿ ಮುಂಚಿ ಬಾಗಿಲಕ್ಕೆ ಹಾಕಿದ ಕೀಲಿಯನ್ನು ಯಾವುದೋ ಆಯುಧದಿಂದ ಮುರಿದು ಒಳಗೆ ಹೋಗಿ ಒಳಗಡೆ ಟ್ರೇಜರಿಯಲ್ಲಿಟ್ಟಿದ್ದ ಅರ್ಧ ತೊಲೆಯ 2 ಬಂಗಾರದ ಉಂಗುರ ಅ:ಕಿ 30.000/- ರೂ ಹಾಗೂ 1,15,000/- ರೂ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:106/2021 ಕಲಂ: 454,457,380 IPC.

                   ಮಹೇಶ ಶಿವಪ್ಪ ಪಟ್ಟಣಶೇಟ್ಟಿ ಸಾ|| ಕಂಚಿನೇಗಳೂರ ಇವರ ಮನೆಯಲ್ಲಿ ದಿನಾಂಕ : 02-07-2021 ರ ಮುಂಜಾನೆ 10-00 ಘಂಟೆಯಿಂದ ದಿನಾಂಕ : 04-07-2021 ರ ಮುಂಜಾನೆ 06 ಘಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನ ತೆಗೆದು ಮನೆಯ ಒಳಗಡೆ ಕೊಣೆಯಲ್ಲಿದ್ದ ಟಿಜೂರಿಯನ್ನು ಮೀಟಿ ತೆಗೆದು ಅದರಲ್ಲಿ ಇದ್ದ  1)ನಗದು ಹಣ 6000/- ರೂ 2)11 ಗ್ರಾಂ ತೂಕದ ಬಂಗಾರದ ನಕ್ಲೇಶ ಸರ ಅ.ಕಿ.45.000/- ರೂ 3)20 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಚೈನ ಸರ ಅ.ಕಿ.80.000/-ರೂ ಒಟ್ಟು 1.31.000/-(ಒಂದು ಲಕ್ಷ ಮುವತ್ತೊಂದು ಸಾವಿರ ) ಕಿಮ್ಮತ್ತಿನೇದವುಗಳನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

            ಪ್ರವೀಣ ರುದ್ರಪ್ಪ ಯಲಿಗಾರ ವಯಾ: 32 ಸಾ|| ಹುರುಳಕುಪ್ಪಿ ಇವನು ತನ್ನ ಮತ್ತು ತನ್ನ ಅಣ್ಣ ವೀರಪ್ಪ ಯಲಿಗಾರ ಇವರ ಜಂಟಿ ಖಾತೆಯಲ್ಲಿ ಹುರುಳಿಕುಪ್ಪಿ ಹದ್ದಿಯಲ್ಲಿ ರಿ..ನಂ- 74/4 ಕ್ಷೇತ್ರ 4 ಎಕರೆ ಜಮೀನು ಇದ್ದು ಅದೆ ಸಾಗುವಳಿ ಸಲುವಾಗಿ 2019 ಸಾಲಿನಲ್ಲಿ ಕೆ.ವ್ಹಿ.ಜಿ. ಬ್ಯಾಂಕ್ ಹುರುಳಿಕುಪ್ಪಿಯಲ್ಲಿ 2,00,000/-  ರೂಪಾಯಿ ಬೆಳೆಸಾಲ, ಕೆ.ವ್ಹಿ.ಜಿ. ಬ್ಯಾಂಕ್ ಸವಣೂರದಲ್ಲಿ 25,000/- ರೂಪಾಯಿ ಗೋಲ್ಡ್ ಲೋನ್ ಮತ್ತು ಎಲ್ & .ಟಿ. ಪೈನಾನ್ಸ್ ಹಾವೇರಿಯಲ್ಲಿ 7,00,000/- ರೂಪಾಯಿ, ಟ್ರ್ಯಾಕ್ಟರ್ ಸಾಲ ಮತ್ತು  ಶ್ರೀ ಮಹಿಳಾ ಬಸವೇಶ್ವರ ಸಂಘ ಹುರುಳಿಕುಪ್ಪಿಯಲ್ಲಿ 40,000/- ರೂಪಾಯಿ ಹೀಗೆ ಒಟ್ಟು 9,65,000/-  ರೂ ಗಳ ತೆಗೆಸಿ ಅವರ ಜಮೀನದ ಉಳುಮೆಗಾಗಿ ಖರ್ಚು ಮಾಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಸುರಿದ ಮಳೆಗೆ ಅವರ ಜಮೀನದಲ್ಲಿ ಹಾಕಿದ ಬೆಳೆಯೂ ಸಂಪೂರ್ಣ ಲುಕ್ಷಾನ ಆಗಿದ್ದರಿಂದ ದಿನಾಂಕ- 28-06-2021 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ- 29-06-2021 ರ ಬೆಳಿಗ್ಗೆ 08-00 ಗಂಟೆ ನಡುವಿನ ಅವಧಿಯಲ್ಲಿ ತನ್ನ ಮನೆಯಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವನೆ ಮಾಡಿ ಉಪಚಾರಕ್ಕೆ ಸವಣೂರ ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೇ ದಿನಾಂಕ- 03-07-2021 ರಂದು ಸಂಜೆ- 7-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ, ಅದು ಬಿಟ್ಟು ಅವನ ಸಾವಿನಲ್ಲಿ ಬೇರೆನೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ಹೆಂಡತಿಸ ಜೋತಿ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 09-07-2021 07:13 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ