ಅಭಿಪ್ರಾಯ / ಸಲಹೆಗಳು

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 28/2021 ಕಲಂ: 23, 324, 307, 354(B), 448, 504, 506, 34 IPC.

               ಕುಮಾರ ಚನ್ನಪ್ಪ ಗೊಣ್ಣೆಪ್ಪನವರ ಹಾಗೂ ಸಹಚರರು ಗಂಗಪ್ಪ ಮತ್ತು ಪಕ್ಕಿರವ್ವ ಇವರೆಲ್ಲರು ಪ್ರೇಮಾ ಗೊಣ್ಣೆಪ್ಪನವರ ಇವರ ಆಸ್ತಿ ನಂ282 ನೇದ್ದರಲ್ಲಿ ಕಸ ಮುಸರಿ ಒಗೆಯುವದು ಮಾಡುತ್ತಿದ್ದು ಅದಕ್ಕೆ ಯಾಕೇ ನಮ್ಮ ಜಾಗೆಯಲ್ಲಿ ಕಸ ಮುಸರಿ ಒಗೆಯುತ್ತಿದ್ದಿರಿ  ಮನೆಯ ಪೂಜೆಯನ್ನು ಹಾಳುಮಾಡಬೇಕೆಂದು ನಮ್ಮ ಜಾಗೆಯಲ್ಲಿ ಕಸ ತಿಪ್ಪಿಯನ್ನು ಹಾಕುತ್ತಿದ್ದರಿ ಅಂತಾ, ನಿಮ್ಮ ಆಸ್ತಿಯಲ್ಲಿ ಹಾಕಿಕೊಳ್ಳಿ ಅಂತಾ ಲೇ ಬೋಸಡಿ ಸೂಳಿ ನಿಂದು ಬಾಳ ಆಗೈತಿ ಏನು ನೀನ್ನ ತಿಂಡಿ ಅಂತಾ ಕೈಯಲ್ಲಿದ್ದ ಬೂಟ್ಟಿಯಿಂದ ಪ್ರೇಮಾ ಇವರ ದುಬ್ಬಕ್ಕೆ ರಪ್ಪನೆ ಹೊಡೆದಿದ್ದು ಆಗ ಯಾಕೇ ಹೊಡೆಯಿತ್ತಿರಿ ಅಂತಾ ಕೇಳಿದಾಗ ಅಲ್ಲೆ ಇದ್ದ ಗಂಗಪ್ಪ ಬುಟ್ಟಿಯಿಂದ ಹೊಡೆಬೇಡಾ ಅಕಿ ಹಾದರಗಿತ್ತಿಮಗಳು ಬಾಳ ಹಾರಾಡತಾಳೆ ಅಕಿಯನ್ನು ಕೊಡಗೋಳು ತಂದು ಅಡ್ಡಡ್ಡಾಗಿ ಸಿಳ್ಳಿಬಿಡು ಮುಂದೆ ನಾನು ನೋಡಿಕೊಳ್ಳುತ್ತೇನೆ ಅಂತಾ ಹೇಳುತ್ತಾ ಕಪಾಳಕ್ಕೆ ಎರಡು ಸಲ ಜೋರಾಗಿ ಹೊಡೆದು ಮತ್ತೆ ದುಪ್ಪಟ್ಟವನ್ನು ಮತ್ತು ರಟ್ಟೆಯನ್ನು ಹಿಡಿದು ಎಳೆದಾಡಿ ಕುತ್ತಿಗೆಯನ್ನು ಹಿಚುಕಿ ಉಸುರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದು ರಕ್ತ ಬರುವಂತೆ ಗಾಯ ಪಡಿಸಿದ್ದು ಅಲ್ಲದೆ ಕೊಲೆ ಮಾಡಲು ಪ್ರಯತ್ನಿಸಿ ಅವಾಚ್ಯವಾಗಿ ಬೈದಾಡಿ ಜೀವದ ಬೇದರಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 19/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

           ಸುರೇಶ ತಂದೆ ಬಸವಣ್ಣೆಪ್ಪ ಏರೇಶಿಮಿ ವಯಾ-42 ವರ್ಷ. ಉದ್ಯೋಗ-ವ್ಯವಸಾಯ, ಜಾತಿ-ಹಿಂದೂ-ಲಿಂಗವಂತ. ಸಾ-ಕದರಮಂಡಲಗಿ ಇವ್ರು ತಮ್ಮ ತಂದೆಯ ಹೆಸರಿನಲ್ಲಿರುವ 05-00  ಎಕರೆ ಜಮೀನಿಗೆ ಪ್ರತಿ ವರ್ಷ ಹತ್ತಿ ಮತ್ತು ಗೋವಿನ ಜೋಳ ಪೀಕು ಹಾಕುತ್ತಾ ಬಂದಿದ್ದು ಇರುತ್ತದೆ. ಜಮೀನಿಗೆ ಪೀಕು  ಹಾಕಲು ಕೆವ್ಹಿಜಿ ಬ್ಯಾಂಕ್ ಕದರಮಂಡಲಗಿ ಶಾಖೆಯಲ್ಲಿ 2019  ರಲ್ಲಿ 4,00,000/-  ರೂ ಬೆಳಸಾಲ ತೆಗೆದುಕೊಂಡಿದ್ದು ಈಗ 02-03  ವರ್ಷದಿಂದ ಮಳೆ ಇಲ್ಲದೇ ಅತಿಯಾದ ಮಳೆಯಿಂದ ಜಮೀನಿಗೆ ಹಾಕಿದ ಪೀಕುಗಳು ಹಾಳಾಗಿದ್ದರಿಂದ ತಾನು ಮಾಡಿದ ಸಾಲವನ್ನು ತೀರಿಸುವದು ಹೇಗೆ ಅಂತಾ ಚಿಂತೆ ಮಾಡುತ್ತಿದ್ದು ಮನೆಯವರು ಬುದ್ಧಿವಾದ ಹೇಳಿದ್ರೂ ತಾನೂ ಮಾಡಿದ ಸಾಲದ ಬಗ್ಗೆ ಚಿಂತೆ ಮಾಡುವದನ್ನೇ ಬಿಟ್ಟಿರಲಿಲ್ಲ. ಅದೇ ಚಿಂತೆಯಲ್ಲಿ  ದಿನಾಂಕ:  04-05-2021  ರಂದು  ಮುಂಜಾನೆ 11-30  ಘಂಟೆಯಿಂದ 12-00  ಘಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ತನ್ನ ವಾಸದ ಮನೆಯ ರೂಮಿನಲ್ಲಿ ಬಿದಿರಿನ ಗಳಕ್ಕೆ ನೇಣು ಹಾಕಿಕೊಂಡು ಮರಣ ಹೊಂದಿರುತ್ತಾನೆ ಅವನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಅಂತಾ ಮೃತನ  ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 06-05-2021 01:48 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ