ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:102/2021 ಕಲಂ: 379 IPC.

                     ಪ್ರಕಾಶ ಮಡಿವಾಳರ ಸಾ|| ಹೋಳೆಇಟಗಿ ಇವರು ಸದ್ಬವ ಖಾಸಗಿ ಕಂಪನಿಯಲ್ಲಿ ವಾಚ್ ಮೆನ್ ಕೆಲಸ ಮಾಡುತ್ತಿದ್ದು. ದಿನಾಲು ತನ್ನ ಅಣ್ಣ ವಿನಾಯಕ ಇವನ ಹೆಸರಿನಲ್ಲಿರುವ ಮೋಟಾರ ಸೈಕಲ್ಲ ನಂಬರ ಕೆಎ-26-ಇಡಿ-1948  ಕಪ್ಪು ಮತ್ತು ಹಸಿರು ಬಣ್ಣದ್ದು ಅ:ಕಿ: 70000/- ರೂಗಳು ನೇದ್ದರಲ್ಲಿ ಗುತ್ತಲಕ್ಕೆ ಹೋಗಿ ಬಂದು ಮಾಡುತ್ತಿದ್ದು. ದಿನಾಂಕ; 01-09-2021 ರಂದು ಸಂಜೆ 07-00 ಗಂಟೆಗೆ ತಮ್ಮೂರ ಮೈಲಾರಪ್ಪ ಹುಲ್ಲೂರ ಇವರನ್ನು ಕರೆದುಕೊಂಡು ವಾಚ್ಮನ್ ಕೆಲಸಕ್ಕೆ ಗುತ್ತಲಕ್ಕೆ ಬಂದು ಮೋಟಾರ ಸೈಕಲ್ಲನ್ನು ಹಾವೇರಿ ರಸ್ತೆಯಲ್ಲಿ ಸೈಪುಲ್ಲಾ ಜಡದಿ ಇವರ ಕಬ್ಬಿಣದ ಅಂಗಡಿಯ ಮುಂದೆ ಇಟ್ಟ ಬೈಕನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು  ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:119/2021 ಕಲಂ: 380,454,457 IPC.

                     ದಿನಾಂಕ; 02-09-2021 ರಂದು ಸಂಜೆ 6-00 ಗಂಟೆಯಿಂದ ಈ ದಿವಸ ದಿನಾಂಕ; 03-09-2021 ರಂದು ಮುಂಜಾನೆ 8-00 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಕೋಡ ಗ್ರಾಮದ ಶ್ರೀ ಹೊನ್ನಮ್ಮ ದೇವಿ ದೇವಸ್ಥಾದ ಮುಂದಿನ ಬಾಗಿಲಿಗೆ ಹಾಕಿದ ಕೀಲಿಯನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಹೋಗಿ ಅಲ್ಲಿದ್ದ ಕಾಣಿಗೆ ಕಬ್ಬಿಯನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಅದರಲ್ಲಿದ್ದ 1) ಸುಮಾರು 2000/- ರೂ ಹಣವನ್ನು ಮತ್ತು 2) ದೇವರ ಮೈಮೇಲಿದ್ದ 80 ಗ್ರಾಂ ತೂಕದ 03 ಬೆಳ್ಳಿ ಲಿಂಗದ ಕಾಯಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 13-09-2021 11:22 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ