ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:135/2021 ಕುರಿ ಕಳ್ಳತನ.

               ದಿನಾಂಕಃ02-08-2021 ರಂದು 22-00 ಗಂಟೆಯಿಂದ ದಿನಾಂಕಃ03-08-2021 ರಂದು ಮುಂಜಾನೆ 5-00 ಗಂಟೆ ಮದ್ಯದ ಅವಧಿಯಲ್ಲಿ ಹರನಗಿರಿ ಗ್ರಾಮದ ಭರಮಪ್ಪ ಹನುಮಂತಪ್ಪ ಕುರುಡಿಹಾಳ ಸಾ|| ಹರಣಗೇರಿ ಇವರ ಮನೆಯ ಮುಂದೆ ಕಟ್ಟಿದ ಒಂದು ಕಪ್ಪು ಬಣ್ಣದ ಸುಮಾರು 20,000/- ರೂ ಬೆಲೆ ಬಾಳು ಕುರಿಯನ್ನು ಯಾರು ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿದ್ದು, ಊರಿನಲ್ಲಿ  ಹಡುಕಾಡಿದ್ದು ಸಿಗದೇ ಇದ್ದುರಿಂದ ಸದರಿ ಕುರಿಯನ್ನು ಪತ್ತೆ ಮಾಡಿ ಕೊಡಲು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:139/2021 ಮಹಿಳೆ ಕಾಣೆ.

            ಕುಮಾರಿ ಸ್ನೇಹಾ ತಂದೆ ಹನುಮಂತಪ್ಪ ಕೋಣನಕೇರಿ ವಯಾಃ16 ವರ್ಷ 11 ತಿಂಗಳು ಉದ್ಯೋಗಃಮನೆಗೆಲಸ ಸಾಃಯಳವಟ್ಟಿ ತಾಃಹಾನಗಲ್ಲ ಇವಳಿಗೆ ದಿನಾಂಕಃ02/08/2021 ರಂದು ಸಾಯಂಕಾಲಃ07-30 ಗಂಟೆಯಿಂದ ರಾತ್ರಿಃ08-00 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಹಿತ್ತಲಿನ ಕಡೆಗೆ ಸಂಡಾಸ್ ಗೆ ಅಂತಾ ಹೋದಾಗ ಯಾರೋ ಕಿಡ್ಯ್ನಾಪ್ ಮಾಡಿಕೊಂಡು ಹೋಗಿದ್ದು ನನ್ನ ಮಗಳಾದ ಸ್ನೇಹಾ ಇವಳು 5 ಫೂಟ್ ಎತ್ತರ, ಗೋದಿಗೆಂಪು ಮೈಬಣ್ಣ, ತಲೆಯಲ್ಲಿ ನೀಳವಾದ ಕಪ್ಪು ಕೂದಲು ಹೊಂದಿದ್ದು ಕನ್ನಡ ಮಾತನಾಡಲು ಬರೆಯಲು ಬರುತ್ತಿದ್ದು ನನ್ನ ಮಗಳು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಬಿಳಿ ಬಣ್ಣದ ಕಪ್ಪು ಎಲೆಗಳಿರುವ ಪ್ಯಾಂಟ್ ಧರಿಸಿದ್ದು ಕ್ರೀಮ್ ಕಲರ್ ವೇಲ್ ಧರಿಸಿದ್ದು ಮಗಳಿಗೆ ಪತ್ತೆ ಮಾಡಿಕೊಡಲು ವಿನಂತಿ ಹನುಮಂತಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೆಕೇರೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

            ಕು: ಕರಬಸಮ್ಮ ತಂದೆ ಭೀಮಪ್ಪ ಅಗಳಣ್ಣವರ ವಯಾ: 19 ವರ್ಷ, ಜಾತಿ: ಹಿಂದೂ ಉಪ್ಪಾರ, ಉದ್ಯೋಗ: ಟೈಲರಿಂಗ್ ಕೆಲಸ, ಸಾ: ಮಾಸೂರು ಶಿದ್ದೇಶ್ವರನಗರ ತಾ: ರಟ್ಟಿಹಳ್ಳಿ ಇವಳು ಸನ್ 2020 ರಲ್ಲಿ ಮಾಸೂರಿನಲ್ಲಿ ದ್ವಿತಿಯ ಪಿ.ಯು.ಸಿ ವ್ಯಾಸಾಂಗ ಮುಗಿಸಿ ಮನೆಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು ಮದುವೆ ವಿಚಾರವನ್ನು ಮಾತನಾಡಿದ್ದು ಈ ವಿಚಾರವಾಗಿ ಕರಬಸಮ್ಮ ಇವಳಿಗೆ ಮದುವೆಯಾಗಲು ಇಷ್ಟವಿಲ್ಲದ್ದರಿಂದ ಅದನ್ನೆ ಬೇಜಾರು ಮಾಡಿಕೊಂಡು ದಿನಾಂಕ: 03/08/2021 ರಂದು ಮುಂಜಾನೆ 06-00 ಗಂಟೆಯಿಂದ ಮದ್ಯಾಹ್ನ 14-00 ಗಂಟೆಯ ನಡುವಿನ ಅವಧಿಯಲ್ಲಿ ಮಾಸೂರು ಗ್ರಾಮದ ಶಿದ್ದೇಶ್ವರನಗರದಲ್ಲಿರುವ ತನ್ನ ವಾಸದ ಮನೆಯಲ್ಲಿಯ ಕಟ್ಟಿಗೆಯ ತೊಲೆಗೆ ಸೀರೆಯಿಂದ ತನ್ನಷ್ಟಕ್ಕೆ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಮೃತಳ ಸಾವಿನಲ್ಲಿ ಬೇರೆ ಯಾವದೇ ಸಂಶಯವಿರುವದಿಲ್ಲ ಅಂತಾ ಮೃತಳ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

            ಚಂದ್ರಮ್ಮ ತಂದೆ ಮಂಜಪ್ಪ ಕವಳಿಕಾಯಿ ವಯಾ 18 ವರ್ಷ ಸಾ|| ಕರೂರ ತಾ|| ರಾಣೆಬೆನ್ನೂರ ಇವಳಿಗೆ ಮಾಸಿಕ ಋತು ಚಕ್ರ ಬಂದಾಗ ಹೊಟ್ಟೆನೋವು ಬರುತ್ತಿದ್ದು ಅದಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದರೂ ಆರಾಮಾಗಿರಲಿಲ್ಲಾ. ನಾನು ಏನಾದರೂ ಮಾಡಿಕೊಂಡು ಸಾಯುತ್ತೇನೆ. ಅಂತಾ ಹೇಳುತ್ತಿದ್ದು ಅದಕ್ಕೆ ಚಂದ್ರಮ್ಮ ಇವರ ತಂದೆ ತಾಯಿ ಇಂದಲ್ಲಾ ನಾಳೆ ಆರಾಮಾಗುತ್ತದೆ ಅಂತಾ ಬುದ್ದಿಹೇಳಿದರೂ ದಿನಾಂಕ 02/08/2021 ರಂದು 18-00 ಗಂಟೆಯಿಂದ 18-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯ ಅಡುಗೆ ಮನೆಯ ಅಂಗ್ಲರ್ ಪಟ್ಟಿಗೆ ಸೀರೆಯ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕೊರಳಿಗೆ ಕಟ್ಟಿಕೊಂಡು ನೇಣು ಹಾಕಿಕೊಂಡಿದ್ದು ಅವಳನ್ನು ಕೆಳಗೆ ಇಳಿಸಿ ರಾಣೆಬೆನ್ನೂರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲ ಮಾಡಿದಾಗ ವೈದ್ಯರು 19-00 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ್ದು, ಈ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತಳ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 12-08-2021 05:42 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080