ಅಭಿಪ್ರಾಯ / ಸಲಹೆಗಳು

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:84/2021 ಕಲಂ: 379 IPC.

              ಮಾಲತೇಶ ಬಡಿಗೇರ ಸಾ|| ದೇವಿಹೊಸೂರ ದಿನಾಂಕ; 07-06-2021 ರ ಬೆಳಗಿನ ಜಾವ 03-00 ಗಂಟೆಯಿಂದ 06-00 ಗಂಟೆಯ ನಡುವಿನ ಅವಧಿಯಲ್ಲಿ ದೇವಿಹೊಸೂರ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ ಅ||ಕಿ|| 20,000/- ರೂ ಕಿಮ್ಮತ್ತಿನ ಕಪ್ಪು ಬಣ್ಣದ ಹಾಗೂ ನೀಲಿ ಬಣ್ಣದ ಸ್ಟಿಕರವುಳ್ಳ ಮೋಟರ ಸೈಕಲ್ಲ ನಂ: ಕೆಎ-27-ವೈ-2217, ಇದರ (ಇಂಜಿನ ನಂ; HA10ELCHM26861, ಚೆಸ್ಸಿ ನಂ; MBLHA10ASCHM49871)  ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:85/2021 ಕಲಂ: EXPLOSIVE SUBSTANCES ACT, 1908 (U/s-3,4,5); 336,337 IPC.

              ಸುಮಾರು 30 ರಷ್ಟು ಸ್ಪೋಟಕ ವಸ್ತುಗಳನ್ನು ಎಲ್ಲಿಂದಲೋ ತಂದು ದಿನಾಂಕ 03-07-2021 ರಂದು ಮುಂಜಾನೆ 10-00 ಗಂಟೆ ಪೂರ್ವದಲ್ಲಿ ಹಾವೇರಿ ರೈಲ್ವೆ ಸ್ಟೇಷನ್ ಹತ್ತಿರದ ಬೂ-ವಿರಾಪೂರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿಯ ತಾಂಡೂರ ಅಂಬುವವರ ಖಾಲಿ ಬಯಲು ಜಾಗೆಯಲ್ಲಿ ಇರುವ ಕಲ್ಲಿನಲ್ಲಿ ಸಂಗ್ರಹಿಸಿಟ್ಟಿದ್ದು, ಅಬ್ದುಲಕಾಧರ ಹಾದಿಮನಿ ಸಾ|| ಹಾವೇರಿ ಹೊಸನಗರ ಇತನು ತನ್ನ ಸಂಬಂದಿಕರ ಮನೆ ಕಟ್ಟುವ ಸಲುವಾಗಿ ಅಲ್ಲಿ ಇದ್ದ ಕಲ್ಲುಗಳನ್ನು ನೋಡಲು ಹೋದಾಗ ಆಕಸ್ಮಿಕವಾಗಿ ಸಂಗ್ರಹಿಸಿಟ್ಟ ಸ್ಪೊಟಕ ವಸ್ತುಗಳು ಕಂಡು ಉತ್ಸುಕತೆಯಿಂದ ಏನೋ ಸಿಕ್ಕಿತು ಅಂತಾ ಅದನ್ನು ಎತ್ತಿಕೊಂಡು ಹಾವೇರಿ ಕಾಗಿನೆಲೆ ರಸ್ತೆಯ ಕನಕಾಪುರ ಭೂ-ಕೋಡಿಹಳ್ಳಿ ರಸ್ತೆ ಮದ್ಯದಲ್ಲಿ ಪೂಲ ಕಟ್ಟೆಯ ಮೇಲೆ ತಂದು ಸಿಕ್ಕ ಅಡುಕೆ ಗಾತ್ರದ ಸ್ಪೋಟಕ ವಸ್ತುಗಳ ಪೈಕಿ ಒಂದನ್ನು ಕೈಯಿಂದ ಒಡೆದಾಗ ಅದು ಸ್ಪೋಟಿಸಿ  ಬಲಗೈಗೆ ತಿರ್ವವಾದ ಗಾಯವಾಗಿದ್ದು, ಇಂತಹ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸುವದರಿಂದ ಅಪಾಯವಾಗುತ್ತದೆ ಅಂತಾ ಗೊತ್ತಿದ್ದು ದುಷ್ಕರ್ಮಿಗಳು ಸಂಗ್ರಹಿಸಿಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:105/2021  ಮಹಿಳೆ ಕಾಣೆ.

                   ಮಗಳಾದ ಕು|| ಸರಸ್ವತಿ ತಂದೆ ದುರಗಪ್ಪ ತಳವಾರ ವಯಾ.18 ವರ್ಷ 4 ದಿವಸ ಜಾತಿ.ಹಿಂದೂ ವಾಲ್ಮೀಕಿ ಉದ್ಯೋಗ.ವಿದ್ಯಾರ್ಥಿ ಸಾ||ಗುಡ್ಡದಮುಳಥಳ್ಳಿ ತಾ||ಹಾನಗಲ್ಲ ಇವಳು ದಿನಾಂಕ : 01-07-2021 ರಂದು  ಮದ್ಯಾಹ್ನ 12-30 ಘಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವಳಿಗೆ ಎಲ್ಲಾ ಕಡೆಗೆ ಹುಡುಕಿದರು ಸಿಕ್ಕಿದ್ದು ಇರುವುದಿಲ್ಲಾ ಕಾರಣ ಕಾಣೆಯಾದ ಸರಸ್ವತಿ ಇವಳನ್ನು ಹುಡುಕಿ ಕೊಡುವಂತೆ ಸುಮಿತ್ರವ್ವ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:31/2021 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

            ಶ್ರೀಮತಿ ಲತಾ ಕೋಂ ಶಂಭುಲಿಂಗನಗೌಡ  ಪಾಟೀಲ ವಯಾ:48 ವರ್ಷ ಸಾ: ಕಳಗೊಂಡ ಹಾಲಿ ವಸ್ತಿ ಬ್ಯಾಡಗಿ ಕಾಕೋಳ ರಸ್ತೆ ಇವಳು  ಈಗ ಕಳೆದ 2  ತಿಂಗಳುಗಳಿಂದ  ಕಿವಿ ನೋವಿನ  ಬಾದೆಯಿಂದ  ಬಳಲುತ್ತಿದ್ದು ಅದಕ್ಕೆ ದಾವಣಗೇರಿ, ಹುಬ್ಬಳ್ಳಿ ,ಹಾವೇರಿ ರಾಣೇಬೆನ್ನೂರು  ಆಸ್ಪತ್ರೆಗಳಲ್ಲಿ  ತೋರಿಸಿದರೂ ಸಹ ಕಿವಿ ನೋವು  ಕಡಿಮೆ  ಆಗದೇ ಇದ್ದುದ್ದರಿಂದ  ತನಗಿರುವ  ನೋವಿನ  ಬಗ್ಗೆ ಚಿಂತೆ  ಮಾಡುತ್ತಾ ಬಂದಿದ್ದು  ಅದೇ ಚಿಂತೆಯಲ್ಲಿ  ತನ್ನಷ್ಟಕ್ಕೆ ತಾನೇ  ದಿನಾಂಕ: 03-07-2021 ರಂದು  ಸಂಜೆ  4-00 ಗಂಟೆಯಿಂದ   5-00ಗಂಟೆ ನಡುವಿನ ಅವಧಿಯಲ್ಲಿ  ತನ್ನ ವಾಸದ ಮನೆಯ ಹಿಂದಿರುವ ಯುಟಿಲಿಟಿ  ಹಾಲಿನಲ್ಲಿ  ಕಬ್ಬಿಣದ ಆಂಗ್ಲರಿಗೆ ತನ್ನ ವೇಲಿನಿಂದ  ಕುತ್ತಿಗೆಗೆ ನೇಣು  ಹಾಕಿಕೊಂಡು  ಮರಣ ಹೊಂದಿರುತ್ತಾಳೆ ವಿನಃ  ಅವಳ ಸಾವಿನಲ್ಲಿ ಬೇರೆ ಏನು  ಸಂಶಯವಿರುವುದಿಲ್ಲಾ ಅಂತಾ ಮೃತಳ ಗಂಡ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 16-07-2021 07:17 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ