ಅಭಿಪ್ರಾಯ / ಸಲಹೆಗಳು

ಬಂಕಾಪೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:35/2021 ಕಲಂ: 506, 34, 498A, 504, 307, 323, 324, 344 IPC.

                 ಜ್ಯೋತಿ ಸಾಂಬಾಜಿ ಶೆಡಗರವಳ್ಳಿ ಇವರನ್ನು ಸಾಂಬಾಜಿ ದುರುಗಪ್ಪ ಶೆಡಗರವಳ್ಳಿ ಇವನೊಂದಿಗೆ  04 ವರ್ಷಗಳ ಹಿಂದೆ ತಮ್ಮ ಸಂಪ್ರದಾಯದಂತೆ ಬಂಕಾಪೂರದ ಮದುವೆ ಮಾಡಿಕೊಟ್ಟಿದ್ದು, ಸದರಿಯವಳು ಗಂಡನ ಮನೆಗೆ ಬಂದು ಸಂಸಾರ ಮಾಡುತ್ತಾ ಬಂದಿದ್ದು ಆದರು ಸಹ ಸಾಂಬಾಜಿ ಜ್ಯೋತಿ ಇವರಿಗೆ ಸರಿಯಾಗಿ ಊಟ ಮತ್ತು ಬಟ್ಟೆ ಕೊಡದೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಸುಮಾರು ದಿನಗಳಿಂದ ಮನೆಯಲ್ಲಿ ಬಂಧನ ಇಟ್ಟಿದ್ದು ಅಲ್ಲದೆ ದಿನಾಂಕ: 03-04-2021 ರಂದು ಮುಂಜಾನೆ 10.30 ಗಂಟೆ ಸುಮಾರಿಗೆ  ಸಾಂಬಾಜಿ ಹಾಗೂ ಅವರ ಮನೆಯವರು ಸೇರಿ ಕೊಲೆ ಮಾಡುವ  ಉದ್ದೇಶದಿಂದಾ ಕೈಯಿಂದಾ ಮತ್ತು ಲತ್ತಿಗುಣಿಯಿಂದ, ಹೊಡಿ ಬಡಿ ಮಾಡಿದ್ದು ಅಲ್ಲದೆ ಹಾಗೂ ಚುಂಚಗದಿಂದ ಜ್ಯೋತಿ ಇವರಿಗೆ ಆಪರೇಷನ ಆದ ಹೊಟ್ಟೆಯ ಭಾಗಕ್ಕೆ ಚುಚ್ಚಿ  ಕೊಲೆ ಮಾಡಲು ಪ್ರಯತ್ನಿಸಿ ಅವಾಚ್ಯವಾಗಿ ಬೈದಾಡಿ, ಜೀವದ ಧಮಕಿ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:54/2021 ಕಲಂ: 307, 323, 324, 427, 504, 506 IPC.

                 ಸಿದ್ದಲಿಂಗ ಚಿನ್ನಿಕಟ್ಟಿ ಸಾ||ರಾಣೇಬೆನ್ನೂರು ಇವರು ಅಶೋಕ ಬಾರ್ ಹತ್ತಿರ ತನ್ನ ದೂಡುವ ಅಂಗಡಿಯಲ್ಲಿ ಎಗರೈಸ ವ್ಯಾಪಾರ ಮಾಡಿಕೊಂಡಿದ್ದವನಿಗೆ ಪಕ್ಕಿರೇಶ ಅರಬಗೊಂಡ ಇತನು ಸುಮಾರು 2-3 ತಿಂಗಳಿನಿಂದ ಎಗರೈಸ ತಿಂದು ಹಣವನ್ನು ಕೊಡದೇ ಹೋಗುತ್ತಿದವನು ದಿನಾಂಕ; 03/04/2021 ರಂದು ಎಗರೈಸ ತಿಂದ ಹಣವನ್ನು ಕೊಡು ಅಂತಾ ಕೇಳಿದ್ದಕ್ಕೆ ಅಂಗಿಯ ಕೊರಳಪಟ್ಟಿ ಹಿಡಿದು ಎಳೆದಾಡಿ, ಬಾಯಿಗೆ ಬಂದಂತೆ ಬೈದು ಜೀವದ ಬೆದರಿಕೆ ಹಾಕಿ ಅಂಗಡಿಯಲ್ಲಿದ್ದ ತತ್ತಿ ಮತ್ತು ರೈಸನ್ನು ಹಾಳು ಮಾಡಿ, ನಂತರ ಕಂದ್ಲಿಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:10/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ರಮೇಶ ರಂಗಪ್ಪ ಚಳಗೇರಿ ವಯಾ 55 ಸಾ|| ಬೆಲುರ ರಾಣೆಬೇನ್ನೂರ ಇವರು ಒಕ್ಕಲುತನ ಮಾಡುತ್ತಾ ಉಪಜೀವನ ಸಾಗಿಸುತ್ತಿದ್ದು ಒಕ್ಕಲುತನದ ಹಾಗೂ ಮನೆತನದ ಉದ್ದೇಶಕ್ಕೆ ಸಾಲವನ್ನು ಮಾಡಿದ್ದು ಅದನ್ನು ತೀರಿಸುವದು ಆಗಲಿಲ್ಲ ಅಂತಾ ಜೀವನದಲ್ಲಿ ಜಿಗುಪ್ಸೆಹೊಂದಿ ದಿ: 03-04-2021 ರಂದು 9-00 ಗಂಟೆಯಿಂದ 11-00 ಗಂಟೆ ಮಧ್ಯದಲ್ಲಿ ಮನೆಯ ಬಾಜೂ ಇರುವ ಖುಲ್ಲಾ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದು ಉಪಚಾರಕ್ಕೆ ರಾಣೇಬೆನ್ನೂರ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು ಹೆಚ್ಚಿನ ಉಪಚಾರಕ್ಕೆ ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ಸಾಗಿಸಿದ್ದು 12-45 ಗಂಟೆಗೆ ಪರೀಕ್ಷಿಸಿದ ವೈದ್ಯರು ಮರಣಹೊಂದಿರುವದಾಗಿ ತಿಳಿಸಿದ್ದು, ಮೃತನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಶವವು ದಾವಣಗೆರೆ ಸಿ.ಜಿ. ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ಹನುಮಂತ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 04-04-2021 12:52 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ