ಅಭಿಪ್ರಾಯ / ಸಲಹೆಗಳು

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:117/2021 ಕಲಂ: 279,304(A) IPC.

                     ದಿನಾಂಕ  02-09-2021 ರಂದು ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿ ಶಿಗ್ಗಾಂವ ಶಹರದ ರಾಯಲ್ ಡಾಬಾ ಎದುರಿಗೆ ಮುಂಜಾನೆ 11.30 ಗಂಟೆಗೆ ಸುಮಾರಿಗೆ ಇಮಾಮಸಾಬ್‌ ಹಜರೆಸಾಬ ನದಾಪ್‌ ಸಾ|| ಶಿಗ್ಗಾವಿ ಇವರು ರಾಯಲ ಡಾಬಾ ಎದುರಿಗೆ ಇದ್ದ ಎನ್ ಹೆಚ್ 4 ರಸ್ತೆ ಮಿಡನ್ ಡೈವರ್ಶನ ಬಳಿ ಬಸ ಚಾಲಕ ತನ್ನ ಬಸ್ಸನ್ನು ಹಾವೇರಿ ಕಡೆಗೆ ಯು ಟರ್ನ ಮಾಡಿ ತಿರುಗಿಸುತ್ತಿದ್ದಾಗ ಶಿಗ್ಗಾಂವ ಐಬಿ ಕ್ರಾಸ್ ಕಡೆಯಿಂದ ಇಮಾಮಸಾವ್‌ ತನ್ನ ಬಾಬತ ಹಿರೋ ಯಾಕ್ಟೀವಾ ಮೋಟಾರ ಸೈಕಲ ಮೇಲೆ ನಿರ್ಲಕ್ಷತನದಿಂದ ಎನ್.ಎಚ್-04 ರಸ್ತೆಯಲ್ಲಿರುವ ಡಿವೈಡರ ಕಡೆಗೆ ಹೊಗುವಾಗ ಮುಂದೆ ಬಸ್ ಬರುತ್ತಿರುವದನ್ನು ಗಮನಿಸದೇ ನಿರ್ಲಕ್ಷತನದಿಂದ ದಾಟಿ ಶಿಗ್ಗಾಂವ ತಹಶೀಲ್ದಾರ ಆಪೀಸ ದಾರಿ ಕಡೆಗೆ ಹೋಗುವ ಸಂದರ್ಬದಲ್ಲಿ ಬಸ್ಸಿನ ಹಿಂಬದಿ ಚಕ್ರಕ್ಕೆ ಬಿದ್ದು ಬಲವಾದ ಗಾಯ ಹೊಂದಿ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:118/2021 ಕಲಂ: 380,454,457 IPC.

                     ದಿನಾಂಕ; 31-08-2021 ರಂದು ಸಂಜೆ 5-30 ಗಂಟೆಯಿಂದ ದಿನಾಂಕ; 01-09-2021 ರಂದು ಮುಂಜಾನೆ 9-00 ಗಂಟೆ ನಡುವದಿನ ಅವದಿಯಲ್ಲಿ ಹಂಸಭಾವಿ ಗ್ರಾಮದ ಹೊಳಿಬಸವೇಶ್ವರ ಬಡಾವಣೆಯಲ್ಲಿ ಇರುವ ಮಂಜುನಾಥ ಚನ್ನಬಸಪ್ಪ ಮಾಗಾವಿ ಇವರ ಮನೆಯ ಕೀಲಿಯನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಹೋಗಿ ಕೀಲಿ ಹಾಕದೆ ಇರುವ ಟ್ರಜೂರಿಯಲ್ಲಿ (ಬೀರ್ನಲ್ಲಿ) ಇಟ್ಟಿದ್ದ ಸುಮಾರು 8,400/- ರೂ ಕಿಮ್ಮತ್ತಿನ ಬೆಳ್ಳಿ ಆಭರಣಗಳನ್ನು ಮತ್ತು ಸುಮಾರು 42,000/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಹೀಗೆ ಒಟ್ಟು 50,400/- ರೂ ಕಿಮ್ಮತ್ತಿನ ಆಭರಣಗಳನ್ನು ಮತ್ತು 12,000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:141/2021 ಮಹಿಳೆ ಕಾಣೆ.

                     ಶ್ರೀಮತಿ.ಹಾಲವ್ವ ಕೋಂ ಶಂಭಪ್ಪ ಪವಾಡಿ ವಯಾ.42 ವರ್ಷ ಜಾತಿ.ಹಿಂದೂ ಲಿಂಗವಂತ ಉದ್ಯೋಗ.ಮನೆ ಕೆಲಸ ಸಾ||ವರ್ದಿ ತಾ||ಹಾನಗಲ್ಲ ಇವಳು ದಿನಾಂಕ : 30/08/2021 ರಂದು ಮುಂಜಾನೆ 08-30 ಘಂಟೆ ಸುಮಾರಿಗೆ ಮನೆಯಲ್ಲಿ ವಾಕಿಂಗ್ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ಹಾಲವ್ವ ಇವರನ್ನು ಹುಡುಕಿಕೊಡಬೇಕೆಂದು ಶಂಬಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 13-09-2021 11:14 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ