ಅಭಿಪ್ರಾಯ / ಸಲಹೆಗಳು

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:19/2021 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

            ವಿಜಯಲಕ್ಷ್ಮೀ ರಾಮಪ್ಪ ಧಾರವಾಡ ವಯಾ:65 ಸಾ|| ಶಿಗ್ಗಾವಿ ಸುಮಾರು ದಿವಸಗಳಿಂದ ಮಾನಸಿಕವಾಗಿ ಅಸ್ವಸ್ಥಳಾಗಿದ್ದು ಈ ಬಗ್ಗೆ ಆಸ್ಪತ್ರೆಗೆ ತೋರಿಸಿದೂ ಗುಣಮುಖವಾಗಿರಲಿಲ್ಲಾ. ಇದರಿಂದ ಅವಳು ತನಗಿದ್ದ ಮಾನಸಿಕ ಅಸ್ವಸ್ಥೆತೆಯಲ್ಲಿ ಸರಿಯಾಗಿ ಊಟ ಮಾಡುತ್ತಿರಲಿಲ್ಲಾ ಸುಮ್ಮನೇ ಕೂರುತ್ತಿದ್ದಳು ನಾವೇ ಅವಳನ್ನು ಸಮಾದಾನ ಪಡಿಸಿ ಊಟ ಮಾಡಿಸುತಿದ್ದೇವು. ಆದರೂ ಅವಳು ತನಗಿದ್ದ ಮಾನಸಿಕ ಅಸ್ವಸ್ಥತೆಯಲ್ಲಿ ದಿನಾಂಕ : 02-08-2021 ರಂದು ಮುಂಜಾನೆ 09.30 ಗಂಟೆಯಿಂದ 10.30 ಗಂಟೆಯ ನಡುವಿನ ಅವದಿಯಲ್ಲಿ ತನ್ನಷ್ಟಕ್ಕೆ ತಾನೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಸೀರೆಯಿಂದ ಮನೆಯ ಮೇಲೆಯಿದ್ದ ತೊಲೆಗೆ ಕಟ್ಟಿ ಉರುಲು ಹಾಕಿಕೊಂಡು ಮರಣ ಹೊಂದಿರುತ್ತಾಳೆ ವಿನ: ಅವಳ ಮರಣದಲ್ಲಿ ಬೇರೆ ಏನು ಸಂಶಯ ವಿರುವದಿಲ್ಲಾ ಅಂತಾ ರಾಮಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:23/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಹೊಳಿಯಪ್ಪ ಬಸಪ್ಪ ಶಿಡಗನಾಳ ವಯಾ: 44 ಸಾ|| ಯಲ್ಲಾಪೂರ  ಇವನು ಹೊಲ ಮನಿಯ ಸಂಭಂದ ಅರೇಮಲ್ಲಾಪುರ ಕೆ ವಿ ಜಿ ಬ್ಯಾಂಕಿನಲ್ಲಿ 30000/- ರೂಗಳನ್ನು ಬೆಳೆಸಾಲ ಹಾಗೂ ಅವರಿವರ ಕಡೆಗೆ ಕೈ ಗಡಾ ಅಂತಾ 4-5 ಲಕ್ಷದಷ್ಟು ಸಾಲ ಮಾಡಿದ್ದು 2-3 ವರ್ಷದಿಂದಾ ಸರಿಯಾಗಿ ಬೆಳೆ ಬಾರದೇ ಇದ್ದುದರಿಂದಾ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ 02-08-2021 ರಂದು ಮುಂಜಾನೆ 8-00 ಗಂಟೆಯಿಂದಾ 4-30 ಗಂಟೆಯ ನಡುವಿನ ಅವದಿಯಲ್ಲಿ ಮುರಗೇಶಪ್ಪ ಹುಲ್ಲತ್ತಿ ಸಾ: ಮೇಡ್ಲೇರಿ ಇವರ ಹೊಲದಲ್ಲಿರುವ ನೆರಕಿ ಚಪ್ಪರದಲ್ಲಿ ಗಳಕ್ಕೆ ವಾಯರ ಹಗ್ಗದಿಂದಾ ಕುತ್ತಿಗಿಗೆ ಉರಲು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ರಂಗಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:25/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

            ಕು. ಸರೋಜಾ @ ಅನಿತಾ ತಂದೆ ಚಂದ್ರಪ್ಪ ಲಮಾಣಿ ವಯಾಃ17 ವರ್ಷ 5 ತಿಂಗಳು ಜಾತಿಃಹಿಂದೂ ಲಮಾಣಿ ಉದ್ಯೋಗಃ ಮನೆಗೆಲಸ ಸಾಃಜಂಗಿನಕೊಪ್ಪ ತಾ||ಹಾನಗಲ್ಲ ಇವಳು ತನಗಿದ್ದ ಗಾಳಿಶಕದಿಂದ ದಿನಾಂಕಃ01/08/2021 ರಂದು ಮದ್ಯಾಹ್ನ:12-00 ಗಂಟೆಯಿಂದ ಮಧ್ಯಾಹ್ನ:12-30 ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಮನೆಯ ಹಿತ್ತಲದಲ್ಲಿ ಕಳೆಗೆ ಹೊಡೆಯಲು ಅಂತಾ ಇಟ್ಟಿದ್ದ ಕಳೆ ನಾಶಕ ಔಷಧಿಯನ್ನು ತನ್ನಷ್ಟಕ್ಕೆ ತಾನೇ ಸೇವನೇ ಮಾಡಿ ಉಪಚಾರಕ್ಕೆ ಅಕ್ಕಿಆಲೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿ ಉಪಚಾರ ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ದಾಖಲು ಮಾಡಿದ್ದು ಅಲ್ಲಿ ಉಪಚಾರ ಫಲಿಸದೇ ದಿನಾಂಕಃ02/08/2021 ರಂದು ಬೆಳಗಿನ ಜಾವಃ00-05 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ನಮ್ಮ ಮಗಳ ಸಾವಿನಲ್ಲಿ ಬೇರೆ ಏನೂ ಸಂಶಯವಿರುವುದಿಲ್ಲ. ಅಂತಾ ಮೃತಳ ತಂದೆಯು ವರದಿಯನ್ನು ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ವ್ಯಕ್ತಿ ಸಾವು.

            ಪ್ರಶಾಂತ ತಂದೆ ತುಕಾರಾಮ ಚನ್ನಾಪೂರ ವಯಾ 30 ವರ್ಷ ಜಾತಿ ಮರಾಠ ಉದ್ಯೋಗ ಖಾಸಗಿ ಕಂಪನಿ ಇಂಜೀನಿಯರ್ ನೌಕರ ಸಾ|| ಹುನಗುಂದ ಇತನು ದಿನಾಂಕ: 02-08-2021 ರಿಂದ ಬೆಳಗಿನ 04.00 ಗಂಟೆಯಿಂದ 11.00 ಗಂಟೆಯ ನಡುವಿನ ಅವದಿಯಲ್ಲಿ ಬಾಡದ ಅಲ್ಲಿಪಿಲಿ ಕೆರೆಯ ವಡ್ಡಿನ ಮೇಲೆ ತನ್ನ ಬಾಜು ಒಂದು ವಿಷಯದ ಬಾಟಲ್ ಮತ್ತು ನೀರಿನ ಬಾಟಲ ಇಟ್ಟುಕೊಂಡು ಮೃತಪಟ್ಟಿದ್ದು ಈ ಬಗ್ಗೆ ಸ್ಥಳಕ್ಕೆ ಮೃತನ ತಂದೆ ಬಂದು ನೋಡಿ ಮಗ  ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಈ ಬಗ್ಗೆ ನಮಗೆ ಆತನ ಸಾವಿನ ಬಗ್ಗೆ ಸಂಶ ಇರುತ್ತದೆ ಕಾರಣ ನನ್ನ ಮಗನ ಸಾವಿನ  ಬಗ್ಗೆ ತನಿಖೆ ಮಾಡಿ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ  ಅಂತಾ ಮೃತನ ತಂದೆ ವರದಿ ನೀಡಿದ್ದು  ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 12-08-2021 05:41 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ