ಅಭಿಪ್ರಾಯ / ಸಲಹೆಗಳು

ರಾಣೆಬೇನ್ಣೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:113/2021 ಕಲಂ: 392 IPC.

        ದಿನಾಂಕಃ02-07-2021 ರಂದು 6-40 ಗಂಟೆ ಸುಮಾರಿಗೆ ಶ್ರೀಮತಿ ಸುಬದ್ರ ಮಹೇಶ ಕಲಾಲ ಇವರು ರಾಣೇಬೆನ್ನೂರು ಮಾಗೋಡ ರಸ್ತೆಯಲ್ಲಿರುವ ಕೆ.ಹೆಚ್.ಬಿ ಕಾಲೋನಿ ಪೇಸ್ -1 ರಲ್ಲಿರುವ ತಮ್ಮ ಮನೆಯ ಹತ್ತಿರ ವಾಕ್ ಮಾಡುವ ಕಾಲಕ್ಕೆ ಸುಮಾರು 22 ರಿಂದ 24 ವರ್ಷದ ಮತ್ತು 30 ರಿಂದ 32 ವರ್ಷದ ಯಾರೋ ಅಪರಿಚಿತ ಎರಡು ಜನ ದುಸ್ಕರ್ಮಿಗಳು ಸ್ಲೆಂಡರ್ ಮೋಟರ ಸೈಕಲದಲ್ಲಿ ಬಂದು ಸುಬದ್ರ ವಾಕ್ ಮಾಡುವುದನ್ನು ನೋಡಿ ಮೋಟರ ಸೈಕಲ ಹಿಂದೆ ಕುಳಿತ ವ್ಯಕ್ತಿಯು ಸುಬದ್ರ  ಇವರನ್ನು ಹಿಡಿದುಕೊಂಡು ಬಾಯಿ ಮುಚ್ಚಿ ಹಿಡಿದು ಕೊರಳಲ್ಲಿರುವ ಸುಮಾರು 2,00,000/- ರೂ ಬೆಲೆ ಬಾಳುವ 50 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಹೆದರಿಸಿ ಕಿತ್ತುಕೊಂಡು ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:188/2021 ಕಲಂ: 454,457,380 IPC.

                   ಗಂಗವ್ವ ರಾಮಣ್ಣ ಲಮಾಣಿ ಸಾ|| ರತ್ನಾಪೂರ ತಾಂಡಾ ಇವರ ಮನೆಯಲ್ಲಿ ದಿನಾಂಕಃ28/06/2021 ರಂದು ಸಾಯಂಕಾಲಃ 06-00 ಗಂಟೆಯಿಂದ ದಿನಾಂಕಃ 29/06/2021 ರಂದು ಸಾಯಂಕಾಲಃ06-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ರತ್ನಾಪೂರ ತಾಂಡಾದಲ್ಲಿರುವ ಗಂಗವ್ವ ಇವರ ವಾಸದ ಮನೆಯ ಅಡುಗೆ ಮನೆಯ ಮೇಲಿನ ಹಾಗೂ ಬಚ್ಚಲು ಮನೆಯ ಮೇಲಿನ ಹೆಂಚುಗಳನ್ನು ತಗೆದು ಮನೆಯ ಒಳಗೆ ಇಳಿದು ಮನೆಯ ದೇವರ ಕೋಣೆಯಲ್ಲಿ ಟ್ರೆಜುರಿಯ ಬಾಗಿಲನ್ನು ತಗೆದು ಟ್ರೆಜುರಿಯಲ್ಲಿಟ್ಟಿದ್ದ 1,25,250/- ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣ ಹಾಗೂ ಬೆಳ್ಳಿಯ ಸಾಮಾನುಗಳನ್ನು ಮತ್ತು ಟ್ರೆಜುರಿಯಲ್ಲಿಟ್ಟಿದ್ದ 80,000/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:15/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

            ಅನ್ವರಸಾಬ ಹಜರೆಸಾಬ ಸುಲ್ತಾನಪೂರ ವಯಾ: 51 ಸಾ|| ಶಿಗ್ಗಾವಿ ಇವರು ದಿನಾಂಕ : 02/07/2021 ರಂದು ಮದ್ಯಾಹ್ನ 03.30 ಗಂಟೆಯಿಂದ 04.00 ಗಂಟೆಯ ನಡುವಿನಲ್ಲಿ ವಿಪರೀತ ಸರಾಯಿ ಕುಡಿಯುತ್ತಿದ್ದು ಸರಾಯಿ ಕುಡಿದ ನಶೆಯಲ್ಲಿ ಮನೆಯಲ್ಲಿ ಕಬ್ಬಿಣದ ಪಟ್ಟಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದು ವಿನ: ಅವನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಅಂತಾ ಮೃತನ ಮಗ ನೀಡಿದ ವರದಿ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 09-07-2021 06:56 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080