ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 70/2021 ಕಲಂ: 279, 304(A)) IPC.

               ನಾಗಪ್ಪ್ಪ ತಂದೆ ಮಲ್ಲಪ್ಪ ಶಿರಗೋಡ, ವಯಾ- 60 ವರ್ಷ,ಜಾತಿ-ಹಿಂದೂ ಲಿಂಗವಂತ,ಉದ್ಯೋಗ-ವ್ಯವಸಾಯ, ಸಾ:ಮಕರವಳ್ಳಿ, ತಾ:ಹಾನಗಲ್ಲ,  ಇವರು ದಿನಾಂಕ:30-04-2021 ರಂದು ಸಂಜೆ 07-00 ಘಂಟೆ ಸುಮಾರಿಗೆ ಮಕರವಳ್ಳಿ ಗ್ರಾಮದ ಶಿವಮೊಗ್ಗಾ-ಹಾನಗಲ್ಲ ರಸ್ತೆಯ ಪ್ರಕಾಶ ತಂದೆ ಹನುಮಂತಪ್ಪ ಬಿದರಕೊಪ್ಪ ಇವರ ಮನೆ ಎದುರಿಗೆ ರಸ್ತೆಯ ಎಡ ಬದಿಯಲ್ಲಿ ತಮ್ಮ ಜಮೀನಿ ನಿಂದ ವಾಪಸ್ಸು ಮನೆಗೆ ಅಂತಾ ಆಕಳನ್ನು ಹಿಡಿದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಮೋಟಾರ್ ಸೈಕಲ್ ನಂಬರ್ ಕೆಎ-27/ಇಎ-5380 ನೇದರ ಸವಾರ ಮಲ್ಲೇಶಪ್ಪ ತಂದೆ ಗಿಡ್ಡಪ್ಪ ಕೊಂಡಜ್ಜಿ, ಸಾ; ಅಜಗುಂಡಿಕೊಪ್ಪ (ಮೂಡೂರ), ತಾ:ಹಾನಗಲ್ಲ ಇವನು ತನ್ನ ಬೈಕಿನಲ್ಲಿ ಹಿಂದೆ ಇಬ್ಬರಿಗೆ ಕೂರಿಸಿಕೊಂಡು ಅತೀವೇಗವಾಗಿ ನಿರ್ಲಕ್ಷತನದಿಂದ ಬೈಕ್ ಚಲಾಯಿಸಿಕೊಂಡು ಹೋಗಿ ಹಿಂದಿನಿಂದ ನಾಗಪ್ಪ ಇವರ ಬಲ ಭಾಗ ಪಕಡಿಗೆ ಡಿಕ್ಕಿಪಡಿಸಿ, ಬಲವಾದ ಒಳಪೆಟ್ಟು ಬಿಳುವಂತೆ ಮಾಡಿದ್ದು ಅಲ್ಲದೇ, ಬಲ ಕಾಲಿಗೂ ಕೂಡಾ ಪೆಟ್ಟು ಬಿಳುವಂತೆ ಮಾಡಿದ್ದು ಅಲ್ಲದೇ, ನಾಗಪ್ಪ ಇವರಿಗೆ ಉಪಚಾರಕ್ಕೆ ದಿನಾಂಕ;01-05-2021 ರಂದು ಅಕ್ಕಿಆಲೂರ ಸರಕಾರಿ ಆಸ್ಪತ್ರೆ, ಹಾವೇರಿ ಮಲ್ಲಾಡದ ಆಸ್ಪತ್ರೆ ಹಾಗೂ ಶಿರಸಿಯ ಟಿಎಸ್ಎಸ್ ಆಸ್ಪತ್ರೆಗಳಲ್ಲಿ ಉಪಚಾರ ಕೊಡಿಸಿದ್ದು ಚಿಕಿತ್ಸೆ ಫಲಿಸದೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಹಾವೇರಿ ಶಹರ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 08/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

           ಮಂಜಯ್ಯ ತಂದೆ ಶಿವಲಿಂಗಯ್ಯ ಚಿಕ್ಕಮಠ ವಯಾ: 29 ವರ್ಷ, ಜಾತಿ: ಹಿಂದೂ, ಜಂಗಮ ಸಾ: ಹಾವೇರಿ, ಉದಯನಗರ ಈತನು ಅವಿವಾಹಿತನಿದ್ದು ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ತನಗೆ ಎಲ್ಲಿಯೂ ಕನ್ಯೆ ಸಿಕ್ಕಿಲ್ಲ ಅಂತ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ದಿನಾಂಕ; 02-05-2021 ರಂದು ಸಾಯಂಕಾಲ 17-00 ಘಂಟೆಯಿಂದ 18-00 ಘಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿನ ಕಟ್ಟಿಗೆಯ ಜಂಟಿಗೆ ಪ್ಲಾಸ್ಟಿಕ್ ಹಗ್ಗವನ್ನು ಕಟ್ಟಿ ತನ್ನಷ್ಠಕ್ಕೆ ತಾನೇ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈತನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಮೃತನ ತಾಯಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 11/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

                        ರಾಮಪ್ಪ ತಂದೆ ನಿಂಗಪ್ಪ ಬಸವನಗೌಡ್ರ ವಯಾ: 61 ವರ್ಷ  ಜಾತಿ: ಹಿಂದೂ  ಲಿಂಗಾಯತ, ಉದ್ಯೋಗ: ಒಕ್ಕಲುತನ ಸಾ: ಮಾಗೋಡ ಇವರು ತಮ್ಮ ಮನೆತನದ ಸಂಬಂದ ಹಾಗೂ ಜಮೀನು ಸಾಗುವಳಿ ಸಂಬಂದ ಎಮ್ ಎಸ್ ಕರೇಗೌಡ್ರು ರಾಣೇಬೆನ್ನೂರು ದಲ್ಲಾಳಿ ಅಂಗಡಿಯಲ್ಲಿ 3,00,000/- ರೂಪಾಯಿ ಸಾಲವನ್ನು ಹಾಗೂ ರಾಶಿ ಸೀಡ್ಸ್ ಬೀಜ ಮತ್ತು ಗೋಬ್ಬರದ ಅಂಗಡಿ ರಾಣೇಬೆನ್ನೂರ ಇವರು ಹತ್ತಿರ 50,000/- ಸಾಲವನ್ನು, ಮತ್ತು ಇಟಗಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತನ ತಂದೆಯ ಹೆಸರಿಗೆ 80,000/- ರೂಪಾಯಿ ಕೃಷಿ ಸಾಲ ಹಾಗೂ 1) ಓಂಕಾರಪ್ಪ ಸಿದ್ಧಪ್ಪ ಮಾಕನೂರ ಇವರ ಹತ್ತಿರ 2,20,000/- ರೂಪಾಯಿ, 2) ಜಗದೀಶ ತಂದೆ ಮಲಕಪ್ಪ ಗೌಡಶಿವನಗೌಡ್ರ ಇವರ ಹತ್ತಿರ 1,40,000/- ರೂಪಾಯಿ ಕೈಗಡ ಸಾಲ ಮಾಡಿದ್ದು  ಒಟ್ಟು  7,90,000/- ರೂಪಾಯಿ ಸಾಲ ಮಾಡಿದ್ದು, ಈಗ ಸುಮಾರು 2-3 ವರ್ಷಗಳಿಂದ ಅತೀ ವೃಷ್ಠಿ ಮತ್ತು ಅನಾವೃಷ್ಠಿಯಿಂದ ಬೆಳೆ ಸರಿಯಾಗಿ ಬಾರದೆ ಇರುವದರಿಂದ ಮಾನಸಿಕ ಮಾಡಿಕೊಂಡು ದಿನಾಂಕ:01-05-2021 ರಂದು ರಾತ್ರಿ 09-30 ಗಂಟೆಯಿಂದ ದಿನಾಂಕ: 02-05-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವದಿಯಲ್ಲಿ ತಮ್ಮ ದನದ ಮನೆಯಲ್ಲಿ ತನ್ನಷ್ಟಕ್ಕೆ ತಾನೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇವರ ಸಾವಿನಲ್ಲಿ ಯಾವುದೆ ಸಂಶಯ ಇರುವದಿಲ್ಲ ಅಂತಾ ಮೃತನ ಪತ್ನಿಯು ವರದಿ ನೀಡಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 17/2021 ವ್ಯಕ್ತಿ ಸಾವು.

                 ಮಹ್ಮದಸಾದಿಕ ಮುತ್ತಲಿಸಾಬ ಖಾಜಿ ವಯಸ್ಸು-25 ವರ್ಷ ಸಾ|| ಗುತ್ತಲ ತಾ|| ಹಾವೇರಿ. ಇವನು ದಿನಾಂಕ; 01-05-2021 ರಂದು ಸಂಜೆ 04-30 ಗಂಟೆಗೆ ಗುತ್ತಲದಲ್ಲಿನ ಶ್ರೀಕನಕದಾಸ ಐಟಿಐ ಕಾಲೇಜಿನಲ್ಲಿ ಗೌಂಡಿ ಕೆಲಸ ಮಾಡುತ್ತಿರುವಾಗ ಅತಿಯಾಗಿ ಗಾಳಿ ಬಿಸಿದ್ದರಿಂದ ಅಲ್ಲಿರುವ ಕೆ ಇ ಬಿ ಕಂಬ ಗಾಳಿ ಒತ್ತಡಕ್ಕೆ ಬಾಗಿದ್ದರಿಂದ ಕರೆಂಟ್ ವಾಯರ ಆಕಸ್ಮಿಕವಾಗಿ ಮಹ್ಮದಸಾದಿಕನ ಎಡಗೈ ಮೊಣಕೈಗೆ  ತಾಗಿ ಕರೆಂಟ್ ಶಾಕ್ದಿಂದ ಮರಣ ಹೊಂದಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಅಂತಾಮಹಮದಹುಸ್ಮಾನ್ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ: 18/2021 ವ್ಯಕ್ತಿ ಸಾವು.

                 ಇದರಲ್ಲಿಯ ಗುದ್ಲೇಶ ಶೇಕಪ್ಪ ಚಿಂಚಳಿ ವಯಾ: 36 ಸಾ|| ಹೋಸರಿತ್ತಿ ಇತನು ತನ್ನ ಹೆಂಡತಿ ಮಕ್ಕಳೊಂದಿಗೆ ಉಪಜೀವನ ಮಾಡುತ್ತಿದ್ದು, ಲಕ್ಷ್ಮೇಶ್ವರದ ವಿಜಯಾ ಬ್ಯಾಂಕಿನಲ್ಲಿದ್ದ ರಿ ಸ ನಂಬರ 42 ನೇ ಜಮೀನದ ಮೇಲೆ ಬೆಳೆ ಸಾಲವನ್ನು 3,50,000/- ಪಡೆದುಕೊಂಡಿದ್ದು ಮತ್ತು ಹೊಸರಿತ್ತಿ ಗ್ರಾಮದಲ್ಲಿ ಕೈಗಡವಾಗಿ 2 ಲಕ್ಷ ರೂಪಾಯಿಗಳನ್ನು ಸಾಲ ಪಡೆದುಕೊಂಡಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 02-05-2021 ರಂದು ಬಾವಿಗೆ ಹಾರಿ ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 06-05-2021 01:43 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ