ಅಭಿಪ್ರಾಯ / ಸಲಹೆಗಳು

ಬಂಕಾಪೂರ  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:33/2021 ಕಲಂ: 506, 504, 323, 325 IPC.

                 ನಿಲವ್ವ ಸಿದ್ದಪ್ಪ ಕಟಗಿ ಸಾ|| ಬಂಕಾಪೂರ ಇವರು ಮನೆಯಲ್ಲಿದ್ದಾಗ ನಿಂಗಪ್ಪ ಮಲ್ಲಪ್ಪ ಕಟಗಿ  ಈತನು ಬಂದು ಏ ಮುದುಕಿ ತೆಂಗಿನಗರಿ ಕಡಿದುಕೊಳ್ಳಿರಿ ನಮ್ಮ ಹಿತ್ತಲದಾಗ ಬಂದಾವು ಅಂದಾಗ ಆಯ್ತು ಅಂತಾ ಹೇಳಿದ್ದು ಅದಕ್ಕೆ ನಿಂಗಪ್ಪ ನಿನ್ನ ತಾಯಿನ ಹಡ ಹಾದರಗಿತ್ತಿಮಗಳಾ ನಮ್ಮ ಬೇವಿನಗಿಡದ ಟೊಂಗಿಗಳನ್ನು ನಾವು ಕಡಿದುಕೊಂಡಿದ್ದು, ನೀವು ಕಡಿದುಕೊಳ್ಳಿರಿ ಹಾದರಗಿತ್ತಿ ಅಂತಾ ಅನ್ನುತ್ತಾ ಬಂದವನೇ ಗಾಯಾಳುವಿಗೆ ಮೇಲೆ ಎತ್ತಿ, ನೆಲಕ್ಕೆ ಒಗೆದು ಕಾಲಿನಿಂದ ಒದ್ದು, ಬಾಯಿಗೆ ಮುಷ್ಟಿ ಮಾಡಿ ಗುದ್ದಿ ಎರಡು ಹಲ್ಲುಗಳು ಮುರಿದು ಬೀಳುವಂತೆ ಮಾಡಿದ್ದು, ಆಗ ಸಿದ್ದಪ್ಪ ಅವಳಿಗೆ ಒಂದು ಗತಿ ಕಾಣಿಸಬೇಕು ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದಾಗ ಮುದುಕಿ ಚೀರುತ್ತಾ ಇದ್ದಾಗ ಅವಾಚ್ಯವಾಗಿ ಬೈದಾಡುತ್ತಾ ಜೀವದ ಬೆದರಿಕೆ ಹಾಕುತ್ತಾ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:05/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ನಾಗಪ್ಪ ತಂದೆ ದುರಗಪ್ಪ ಹೊಸೂರ. ವಯಾ-65 ವರ್ಷ. ಜಾತಿ; ಹಿಂದೂ ವಾಲ್ಮೀಕಿ, ಉದ್ಯೋಗ; ಕೂಲಿ ಕೆಲಸ. ಸಾಃ ಬಾಳಂಬೀಡ. ತಾಃ ಹಾನಗಲ್ಲ. ಇತನು ಅತೀಯಾದ ಸರಾಯಿ ಸೇವನೆ ಚಟವನ್ನು ದಿನಾಂಕ: 01-04-2021 ರಂದು ರಾತ್ರಿ 10-00 ಘಂಟೆ ಸುಮಾರಿಗೆ ಊಟ ಮಾಡಿದ ನಂತರ ಮನೆಯ ಹೊರಗೆ ಮಲಗುತ್ತೇನೆ ಅಂತಾ ಸುಧಾ ಇವರಿಗೆ ಹೇಳಿ ಹೊರಗೆ ಹೋಗಿದ್ದು ನಂತರ ರಾತ್ರಿ 10-30 ಘಂಟೆ ಸುಮಾರಿಗೆ ಮನೆಯ ಹೊರಗೆ ಬಂದು ನೋಡಿದಾಗ ನಾಗಪ್ಪ ಇವರ ಬಾಯಿಯಿಂದ ವಿಷದ ವಾಸನೆ ಬರುತ್ತಿತ್ತು ಆಗ ಕೂಡಲೇ ತನ್ನ ಸಂಬಂದಿಕರಿಗೆ ವಿಷಯ ತಿಳಿಸಿ ಒಂದು ಟಾಟಾ ಏಸ್ ವಾಹನದಲ್ಲಿ ಚಿಕಿತ್ಸೆಗಾಗಿ ಅಕ್ಕಿಆಲೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲ್ ಮಾಡಿದ್ದು ಆದರೆ ನಾಗಪ್ಪ ಇತನು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 02-04-2021 ರಂದು ಮುಂಜಾನೆ 03-00 ಘಂಟೆ ಸುಮಾರಿಗೆ ಮರಣ ಹೊದಿದ್ದು ಇರುತ್ತದೆ ಮತ್ತು ಮೃತನ ಮರಣದಲ್ಲಿ ಯಾವುದೇ ಸಂಶಯ, ಯಾರ ಮೇಲೂ ದೂರು ವಗೈರೆ ಇರುವುದಿಲ್ಲ ಅಂತಾ ಸುದಾ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:09/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

              ಮಂಜುನಾಥ ಉಚ್ಚೇಂಗೆಪ್ಪ ಹಾಲಜ್ಜಿ ವಯಸ್ಸು 18 ವರ್ಷ ಸಾ|| ಮೇಡ್ಲೇರಿ ಇವನು ತನ್ನ ತಂದೆ ತಾಯಿಗೆ ಜಗಳ ಮಾಡಬೇಡರಿ ಅಂತಾ ಹೇಳಿದರು ಸಹಾ ದಿನಾಂಕ 28-03-2021 ರಂದು ಸಾಯಂಕಾಲ ತಂದೆ ತಾಯಿ ಮತ್ತೇ ಜಗಳ ಮಾಡಿದ್ದರಿಂದಾ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಮನೆಯಲ್ಲಿದ್ದ ಯಾವುದೇ ವಿಷವನ್ನು ರಾತ್ರಿ 11-30 ಗಂಟೆಯ ಸುಮಾರಿಗೆ ಸೇವನೆ ಮಾಡಿ ಅಸ್ವಸ್ಥಗೊಂಡು ಉಪಚಾರಕ್ಕೆ ರಾಣೆಬೆನ್ನೂರ ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಥಮ ಉಪಚಾರ ಪಡೆದುಕೊಂಡು ಹೆಚ್ಚಿನ ಉಪಚಾರಕ್ಕೆ ಡಾವಣಗೇರಿ ಸಿ ಜೆ ಆಸ್ಪತ್ರೆಗೆ ದಾಖಲ ಮಾಡಿ ಉಪಚಾರ ಕೊಡಿಸುವ ಕಾಲಕ್ಕೆ ಉಪಚಾರ ಫಲಕಾರಿಯಾಗದೇ ದಿನಾಂಕ 02-04-2021 ರಂದು ಸಾಯಂಕಾಲ 7-15 ಗಂಟೆಗೆ ಮೃತ ಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 03-04-2021 05:56 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080