ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:52/2021 ಮಹಿಳೆ ಕಾಣೆ.

                     ಇಂದುಮತಿ ತಂದೆ ಸಿದ್ದಪ್ಪ ಹೊಸಳ್ಳಿ, ವಯಾ: 18 ವರ್ಷ 2 ತಿಂಗಳು ಇವಳು ದಿನಾಂಕ: 31-08-2021 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ಹಾವೇರಿಗೆ ಹೋಗಿ ದ್ವಿತೀಯ ಪಿ.ಯು.ಸಿ ಆನ್ಲೈನ್ ಅಂಕಪಟ್ಟಿಗೆ ಕಾಲೇಜಿನ ಶೀಲು ಮತ್ತು ಸಹಿ ಹಾಕಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಪರ್ತ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದರಿ ಕಾಣೆಯಾದವಳನ್ನು ಈವರೆಗೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಸಿದ್ದಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:119/2021 ಕಲಂ: 279,337 IPC

                     ದಿನಾಂಕ: 31-08-2021 ರಂದು ರಾತ್ರಿ 10-30 ಗಂಟೆಗೆ ಮೋಟಾರ ಸೈಕಲ್ ರಜಿಸ್ಟರ ನಂಬರ.  ಕೆಎ-27-ವ್ಹಿ-8751 ನೇದ್ದರ ಚಾಲಕ ಪರಸಪ್ಪ ತಂದೆ ರಾಮಪ್ಪ ಡೋಲೆನವರ ಸಾ: ಹಾಲಗಿ ಇತನು ತನ್ನ ಮೋಟಾರ ಸೈಕಲ್ ಹಿಂಬದಿಯಲ್ಲಿ, ಮಂಜಪ್ಪನಿಗೆ ಕೂಡ್ರಿಸಿಕೊಂಡು, ಹಾವೇರಿ-ಗುತ್ತಲ ರಸ್ತೆಯ ಮೇಲೆ ಗಾಂಧೀಪುರ ಗ್ರಾಮದಿಂದ  ಅಗಡಿ ಕಡೆಗೆ, ಹಾಗೂ ಮೋಟಾರ ಸೈಕಲ್ ರಜಿಸ್ಟರ ನಂಬರ ಕೆಎ-27-ಇಎನ್-6384  ನೇದ್ದರ ಚಾಲಕ ಶ್ರೀಕಾಂತ ತಂದೆ ತಿಪ್ಪಣ್ಣ ವಡ್ಡರ ಸಾ: ಗಾಂಧಿಪುರ ಇತನು ತನ್ನ ಮೋಟಾರ ಸೈಕಲ್ ಹಿಂಬದಿಯಲ್ಲಿ ಒಂದು ಮಗು ಹಾಗೂ 1] ನೇತ್ರಾವತಿ 2] ಮಿನಾಕ್ಷಿ  ಅಂಬುವವರಿಗೆ ಕೂಡ್ರಿಸಿಕೊಂಡು ಅಗಡಿ ಗ್ರಾಮದಿಂದ  ಗಾಂಧೀಪುರ ಗ್ರಾಮದ  ಕಡೆಗೆ, ಹೀಗೆ ಇಬ್ಬರೂ ಮೋಟಾರ ಸೈಕಲ್ ಸವಾರರು ತಮ್ಮ ತಮ್ಮ ಮೋಟಾರ ಸೈಕಲ್ಗಳನ್ನು ಅತೀ ಜೋರಾಗಿ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡೊಂಬರಮತ್ತೂರ ಅಂಬುವವರ ಜಮೀನದ ಹತ್ತಿರ ರಸ್ತೆಯ ಮೇಲೆ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿ ಮಾಡಿಕೊಂಡು ಅಪಘಾತ ಪಡಿಸಿಕೊಂಡು ಮೋಟಾರ್ ಸೈಕಲ್ಗಳನ್ನು ಜಕಂಗೊಳಿಸಿದ್ದಲ್ಲದೇ, ಇಬ್ಬರೂ ಸವಾರರು ಗಾಯ ಪಡಿಸಿಕೊಂಡು  ಹಿಂಬದಿಯ ಸವಾರರಿಗೂ ಗಾಯ ಪಡಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:119/2021 ಕಲಂ: INDIAN MOTOR VEHICLES ACT, 1988 (U/s-134(A&B),187); 279,304(A) IPC.

                     ದಿನಾಂಕ:01-09-2021 ರಂದು ಮುಂಜಾನೆ 09-45 ಘಂಟೆ ಸುಮಾರಿಗೆ ಬ್ಯಾಡಗಿ ಠಾಣಾ ವ್ಯಾಪ್ತಿ ಮಾಸಣಗಿ ಗ್ರಾಮದ ಬ್ಯಾಡಗಿ - ತಿಳವಳ್ಳಿ ರಸ್ತೆಯ ಮೇಲೆ  ಹೈಡ್ರಾಲಿಕ್ ಮೊಬೈಲ್ ಕ್ರೈನ್ ನಂಬರ-ಕೆಎ-27/ಎಮ್-7918 ನೇದ್ದರ ಚಾಲಕನು ಕ್ರೇನ್ ವಾಹನವನ್ನು ಅತೀ ಜೋರಿನಿಂದ, ತಾತ್ಸಾರತನದಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು  ಹೋಗುತ್ತಾ ಅದನ್ನು ನಿಯಂತ್ರಣ ಮಾಡದೇ ತನ್ನ ಮುಂದೆ ರಸ್ತೆಯ ಎಡಬದಿಯಲ್ಲಿ ಹೊಲಕ್ಕೆ ಹೊರಟಿದ್ಧ ನಾಗಮ್ಮ ಕೋಂ ಸೋಮನಗೌಡ  ಪಾಟೀಲ ವಯಾ-46 ವರ್ಷ ಸಾ-ಮಾಸಣಗಿ ಇವಳಿಗೆ ಡಿಕ್ಕಿಪಡಿಸಿ ಕೆಳಗೆ ಕೆಡವಿ ಹೊಟ್ಟೆಯ ಮೇಲೆ ಮತ್ತು ಎರಡು ಕಾಲುಗಳ ಮೇಲೆ ಹತ್ತಿಸಿ ಮಾಂಸ-ಖಂಡಗಳು ಹೊರಗೆ ಬರುವಂತೆ ಮಾಡಿ ಬಾರೀ ಗಾಯ ಪಡಿಸಿ,  ಗಾಯಾಳುವಿಗೆ ಉಪಚಾರಕ್ಕೆ ಬ್ಯಾಡಗಿ ಸರ್ಕಾರಿ ಆಸ್ಪತ್ರೆಗೆ 108 ವಾಹನದಲ್ಲಿ ಕಳಿಸಿಕೊಟ್ಟಿದ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ದಾವಣಗೇರಿ ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ಮೃತಪಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:140/2021 ವ್ಯಕ್ತಿ ಕಾಣೆ.

                    ಶ್ರೀ.ಕಲ್ಲಪ್ಪ ತಂದೆ ಕರಿಯಪ್ಪ ಪೂಜಾರ ವಯಾ.46 ವರ್ಷ ಜಾತಿ. ಹಿಂದೂ ಲಿಂಗವಂತ ಉದ್ಯೋಗ ಕೂಲಿ ಕೆಲಸ ಸಾ. ಕೆರೆಕ್ಯಾತನಹಳ್ಳಿ ತಾ.ಹಾನಗಲ್ಲ ಇವನು ದಿನಾಂಕ : 30/08/2021 ರಂದು ರಾತ್ರಿ 10 ಘಂಟೆಯ ಸುಮಾರಿಗೆ ತನ್ನ ಹೆಂಡತಿಯ ಸಂಗಡ ತಂಟೆ ಮಾಡಿಕೊಂಡು ಆ ದಿವಸ ರಾತ್ರಿ ಅದೆ ಗ್ರಾಮದ ನಿಂಗಪ್ಪ ಮಲಗುಂದ ಇವರ ಮನೆಯಲ್ಲಿ ಮಲಗಿಕೊಂಡು ದಿನಾಂಕ : 31-08-2021 ರಂದು ಮುಂಜಾನೆ 08-30 ಘಂಟೆ ಸುಮಾರಿಗೆ ಬ್ಯಾತನಾಳ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಈ ವರಗೆ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವನಿಗೆ ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ಕಲ್ಲಪ್ಪ ಇವನನ್ನು ಹುಡುಕಿಕೊಡಬೇಕೆಂದು ರೂಪಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 13-09-2021 11:12 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ