ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:64/2021 ಕಲಂ: 279,304(A) IPC.

                 ಮದುರಾಜ ತಂದೆ ಮಹದೇವಪ್ಪ ದಡ್ಡೇರ ಸಾ.ಕುಪಗಡ್ಡಿ ತಾ,ಶಿರಸಿ ಇವನು ದಿನಾಂಕ : 31-03-2021 ರಂದು ರಾತ್ರಿ 08-30 ಘಂಟೆ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂಬರ್ ಕೆ.-31 ವಿ-7642 ನೇದರ ಹಿಂಬದಿಯಲ್ಲಿ ತನ್ನ ತಾಯಿಯಾದ ಶ್ರೀಮತಿ.ಈರಮ್ಮ ಕೋಂ ಮಹದೇವಪ್ಪ ದಡ್ಡೇರ ಇವರಿಗೆ ಕೂರಿಸಿಕೊಂಡು ಮಕರವಳ್ಳಿ ಗ್ರಾಮಕ್ಕೆ ಜಾತ್ರೆಗೆ ಅಂತಾ ಬರುತ್ತೀರುವಾಗ ಮಕರವಳ್ಳಿ ಗ್ರಾಮದ ರುದ್ರಪ್ಪ ಪುರ್ಲಿ ಇವರ ಜಮೀನ ಹತ್ತೀರ ಹಾನಗಲ್ಲ-ಶಿವಮೋಗ್ಗಾ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲನ್ನು ಅತಿ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ಪಂಚರ್ ಆಗಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರನ ಹಿಂಬದಿಗೆ ತನ್ನ ಮೋಟಾರ್ ಸೈಕಲ್ ಸಮೇತ ಡಿಕ್ಕಿ ಪಡಿಸಿಕೊಂಡು ತನಗೆ ತಲೆ ಮತ್ತು ಕುತ್ತಿಗೆ ಹತ್ತೀರ ಬಲವಾದ ರಕ್ತಘಾಯವಾಗುವಂತೆ ಮಾಡಿಕೊಂಡು ಸ್ಥಳದಲ್ಲಿಯೆ ಮರಣ ಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:52/2021 ವ್ಯಕ್ತಿ ಕಾಣೆ.

              ದಾನಪ್ಪ ಸಂಗಪ್ಪ ಗಡಾದ ಇವರು ದಿನಾಂಕ: 30-03-2021 ರಂದು ಮುಂಜಾನೆ 8-30 ಗಂಟೆಯಿಂದ 9-20 ಗಂಟೆಯ ನಡುವಿನ ವೇಳೆಯಲ್ಲಿ ರಾಣೇಬೆನ್ನೂರು ಶಹರದ ಅಶೋಕ ನಗರದಲ್ಲಿರುವ ಪುರ್ಣಿಮಾ ದಾನಪ್ಪ ಗಾಡದ ಇವರ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಹೋದವನು ಇಂದಿನವರೆಗೂ ಮರಳಿ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದವನ್ನು ಹುಡುಕಿಕೊಡುವಂತೆ ಪುರ್ಣಿಮಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾವೇರಿ ಶಹರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:07/2021 ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ.

              ಶಿಲ್ಪಾ ಕೋಂ ನಾಗರಾಜ ಯತ್ನಳ್ಳಿ@ ಯತ್ತಿನಹಳ್ಳಿ ವಯಾ: 36 ವರ್ಷ ಇವಳು ಕಳೆದ ಕೆಲ ವರ್ಷಗಳಿಂದ ಮಾನಸಿಕ ಖಾಯಿಲೆ ಹಾಗೂ ಹೊಟ್ಟೆನೋವಿನ ಬಾದೆಯಿಂದ ಬಳಲುತ್ತಿದ್ದು ಸದರಿಯವಳಿಗೆ ದಾವಣಗೆರೆ ಹಾಗೂ ಇತರೆ ಕಡೆಗಳಲ್ಲಿ ಉಪಚಾರ ಕೊಡಿಸುತ್ತಾ ಬಂದಿದ್ದು ಶಿಲ್ಪಾ ತನಗಿದ್ದ ಮಾನಸಿಕ ಖಾಯಿಲೆಯಿಂದ ಯಾವುದೋ ಕಾರಣಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ; 01-04-2021 ರಂದು ಮುಂಜಾನೆ 11:30 ಘಂಟೆಯಿಂದ 12:30 ಘಂಟೆಯ ನಡುವಿನ ಅವದಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಬಚ್ಚಲು ಮನೆಯಲ್ಲಿನ ಕಟ್ಟಿಗೆಯ ತೊಲೆಗೆ ಸೀರೆಯನ್ನು ಕಟ್ಟಿ ಅದರಿಂದ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವಳ ಸಾವಿನಲ್ಲಿ ಬೇರೆ ಯಾವದೇ ಸಂಶಯ ಇರುವುದಿಲ್ಲ ಅಂತ ಮೃತಳ ಅತ್ತೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:10/2021 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ.

              ರಂಗಮ್ಮ ಕೊಂ ಮಂಜುನಾಥ ಮುಗದೂರ ವಯಾ: 28 ವರ್ಷ, ಉದ್ಯೋಗ: ಮನೆಗೆಲಸ, ಜಾತಿ: ಹಿಂದೂ ವಾಲ್ಮಿಕಿ ಸಾ: ಯಲವಿಗಿ ತಾ: ಸವಣೂರ ಇವರ ಗಂಡ ಪ್ರತಿನಿತ್ಯ ಸಾರಾಯಿ ಕುಡಿದು ಬಂದು ಜಗಳ ಮಾಡುತ್ತಿದ್ದು, ಅದರಂತೆ ದಿನಾಂಕ: 31-03-2021 ರಂದು ರಾತ್ರಿಯೂ ಸಾರಾಯಿ ಕುಡಿದು ಬಂದು ಜಗಳ ಮಾಡಿದ್ದು, ಮನೆಯವರೆಲ್ಲರೂ ಸೇರಿ ಜಗಳ ಬಿಡಿಸಿದ್ದು, ಇದರಿಂದಾಗಿ ತನ್ನ ಗಂಡನು ಸಾರಾಯಿ ಕುಡಿದು ಬಂದು ಜಗಳ ಮಾಡುತ್ತಾನೆ ಅಂತಾ ಮಾನಸಿಕವಾಗಿ ಬೇಸತ್ತು ದಿನಾಂಕ: 01-04-2021 ರಂದು ಮುಂಜಾನೆ 5-00 ಗಂಟೆಯಿಂದ 6-30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಕಾರಕ ಎಣ್ಣೆ ಅಥವಾ ಪದಾರ್ಥವನ್ನು ಸೇವನೆ ಮಾಡಿ ಒದ್ದಾಡುತ್ತಿದ್ದವಳಿಗೆ ಯಲವಿಗಿ ಸರಕಾರಿ ಆಸ್ಪತ್ರೆ ಹಾಗೂ ಹೆಚ್ಚಿನ ಉಪಚಾರಕ್ಕಾಗ ಲಕ್ಷ್ಮೇಶ್ವರದ ಮಲ್ಲಾಡದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದು, ಇವಳ ಸಾವಿನಲ್ಲಿ ಸಂಶಯ ಇರುತ್ತದೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಗೌರಮ್ಮ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 03-04-2021 05:47 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ