ಅಭಿಪ್ರಾಯ / ಸಲಹೆಗಳು

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:89/2021 ಕಲಂ: 323,498A,504,506 IPC.

             ಬಸವರಾಜ ಪರಶುರಾಮಪ್ಪ ಕಡಕೊಳ ಹಾಗೂ ಲಕ್ಷ್ಮೀ ಕಡಕೊಳ ಇವರಿಬ್ಬರ ಮದುವೆಯು ದಿನಾಂಕ; 24/06/2007 ರಂದು ರಾಣೇಬೆನ್ನೂರು ಶಹರದ ಸಿದ್ದೇಶ್ವರ ದೇವಸ್ಥಾನದಲ್ಲಿ ಗುರುಹಿರಿಯರ ಸಮಕ್ಷಮ ಜರುಗಿದ್ದು ನಂತರ ಬಸವರಾಜ ಲಕ್ಷ್ಮೀ ಇವಳೊಂದಿಗೆ ತಂಟೆ ತಕರಾರು ಮಾಡುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಾ ಬಂದಿದ್ದು ಅಲ್ಲದೇ ದಿನಾಂಕ; 25/05/2021 ರಂದು ಮುಂಜಾನೆ 10-30 ಗಂಟೆಗೆ ತಮ್ಮ ವಾಸದ ಮನೆಯಲ್ಲಿ ತಂಟೆ ತಕರಾರು ಮಾಡಿ ಕೈಯಿಂದ ಹೊಡಿಬಡಿ ಮಾಡಿ, ಅವಾಚ್ಯವಾಗಿ ಬೈದಾಡಿ, ಜೀವದ ಬೆದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ವಿಷ ಸೇವಿಸಿ ಯುವತಿ ಆತ್ಮಹತ್ಯೆ.

            ಸುಶ್ಮಿತಾ ತಂದೆ: ಸಿದ್ದಪ್ಪ ಲಮಾಣಿ ವಯಾ: 18 ಸಾ|| ಪದ್ಮಾವತಿಪುರ ರಾಣೆಬೇನ್ನೂರ  ಇವರು ಹೊಟ್ಟೆನೋವಿನಿಂದ ಬಳಲುತ್ತಿದ್ದುದಲ್ಲದೇ ಇತ್ತೀಚೆಗೆ ಹೆಚ್ಚಿಗೆ ಮೊಬೈಲದಲ್ಲಿ ಆಟವಾಡುತ್ತಿದ್ದುದರಿಂದ ಹಾಗೆ ಆಟವಾಡಬೇಡ ಅಂತಾ ಅವರ ಪಾಲಕರು ಸಿಟ್ಟು ಮಾಡಿದ್ದರಿಂದ ಜೀವನದಲ್ಲಿ ಜಿಗುಪ್ಸೆಹೊಂದಿ ದಿ: 25-05-2021 ರಂದು 08-20 ಗಂಟೆಗೆ ತಮ್ಮ ಮನೆಯ ಬೆಡ್ರೂಮಿನಲ್ಲಿ ಯವುದೋ ವಿಷಸೇವನೆ ಮಾಡಿದ್ದು ಉಪಚಾರ ಕುರಿತು ಅದೇ ದಿವಸ ವರದಿಗಾರರು ರಾಣೇಬೆನ್ನೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಉಪಚಾರಕ್ಕೆ ದಾವಣೆಗೆರೆ ಬಾಪೂಜಿ ಆಸ್ಪತ್ರೆಗೆ ಹೋಗಿ ಉಪಚಾರ ಕೊಡಿಸಿದರೂ ಗುಣವಾಗದೇ ದಿ:26-05-2021 ರಂದು 11-45 ಗಂಟೆಗೆ ಮರಣ ಹೊಂದಿರುತ್ತಾರೆ ಅವರ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಅಂತಾ ಮೃತಳ ತಂದೆ ಕುರುವತ್ತೆಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 01-06-2021 04:55 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ