ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 31/2021 ಮಹಿಳೆ ಕಾಣೆ.

               ಪ್ರೀತಿ ತಂದೆ ಹನುಮಂತಪ್ಪ ತೊಂಡೂರ, ವಯಸ್ಸು: 17 ವರ್ಷ 02 ತಿಂಗಳು ಇವಳು ದಿನಾಂಕ: 18-04-2021 ರಂದು  ಮುಂಜಾನೆ 8-30 ಗಂಟೆಗೆ ಇವಳು ಎಲ್ಲಿಯೋ ಹೋಗಿದ್ದು, ಅವಳನ್ನು ಇವತ್ತಿನವರೆಗೂ ಹುಡಕಾಡಿದ್ದು ಸಿಕ್ಕಿರುವುದಿಲ್ಲಾ ಮತ್ತು ಅವಳು ಅಲ್ಪವಯಿ ಇದ್ದುದ್ದರಿಂದ ಅವಳನ್ನು ಯಾರೋ, ಯಾವದೋ ಉದ್ದೇಶಕ್ಕಾಗಿ ಆಸೆ ಮತ್ತು ಆಮಿಷ ತೋರಿಸಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯವಿದ್ದು, ಕಾಣೆಯಾದವಳನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಟ್ಟಿಹಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 54/2021 ಕಲಂ: 379 IPC.

          ದಿನಾಂಕ 16-04-2021 ರಂದು ಬೆಳಗ್ಗೆ 10-00 ಗಂಟೆಯಿಂದ ಸಂಜೆ 6-00 ಗಂಟೆಯ ನಡುವಿನ ಅವದಿಯಲ್ಲಿ ರಟ್ಟಿಹಳ್ಳಿ ಗ್ರಾಮದ ಬಗತಸಿಂಗ್ ಸರ್ಕಲನಲ್ಲಿರುವ ಬಸವರಾಜ ಕರಿಯಪ್ಪ ಸುಣಗಾರ ಸಾ|| ಕಡುರ ಇವರ ಮನೆಯ ಮುಂದಿನ ಪ್ಯಾಸೇಜದಲ್ಲಿ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದ ಕಪ್ಪು ಬಣ್ಣದ ಹಿರೋ ಹೊಂಡಾ ಸ್ಲೈಂಡರ ಕೆಎ-27/ಜೆ6084 ಅದರ ಚಾಸ್ಸಿ ನಂ 02ಎಪ್20ಸಿ10164 ಹಾಗೂ ಇಂಜನ್ ನಂ 02ಎಪ್18ಎಮ್06134 ಇದರ ಅಃಕಿ 10,000/-ರೂ ನೇದ್ದನ್ನು ಕಳವು ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 79/2021 ಕಲಂ: 379 IPC.

           ದಿನಾಂಕ; 20-04-2021 ರಂದು ಮದ್ಯಾಹ್ನ 02-30 ಘಂಟೆಯಿಂದ ಸಾಯಂಕಾಲ 05-30 ಘಂಟೆಯ ನಡುವಿನ ಅವಧಿಯಲ್ಲಿ ಹಾನಗಲ್ಲ ಶಹರದ ಕುಮಾರೇಶ್ವರ ನಗರದಲ್ಲಿರುವ ಗುರುಮೂರ್ತಿ ತಂದೆ ಪುಟ್ಟಪ್ಪ ಭದ್ರಾವತಿ ಇವರ ಮನೆಯ ಎದುರಿಗೆ ನಿಲ್ಲಿಸಿದ್ದ ಇಸ್ಮಾಯಲ್ ಮದರಸಾಬ ಕುಸನೂರ ಇವರ ಬಾಬತ್ತ ಕಪ್ಪು ಮತ್ತು ನೀಲಿ ಬಣ್ಣದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ಲ ನಂಬರ ಕೆಎ-27/ಇಕೆ-2292, ಚೆಸ್ಸಿ ನಂಬರ; MBLHARO73HHE14049, ಇಂಜಿನ್ ನಂಬರಃ HA10AGHH14986 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಸಂಖ್ಯೆ: 12/2021 ವ್ಯಕ್ತಿ ಸಾವು.

                        ಮಜೀದಅಲಿ ತಂದೆ ಬುಡನಸಾಬ ಬಳ್ಳೂರ ವಯಸ್ಸು 45 ವರ್ಷ ಸಾ; ಹಳೇಹುಲಿಹಳ್ಳಿ ತಾ: ರಾಣೆಬೆನ್ನೂರ ಇವನ ಹೆಂಡತಿ ಸುಮಾರು 5 ವರ್ಷದಿಂದಾ ಜಗಳ ಮಾಡಿ ಮನೆ ಬಿಟ್ಟು ಹೋಗಿದ್ದು, ಈಗ್ಗೆ 1 ವರ್ಷದ ಹಿಂದೆ ಅಪಘಾತವಾಗಿ ಬಲಗಾಲ ಮೊಣಕಾಲಿಗೆ ಬಾರೀ ಪೆಟ್ಟಾಗಿದ್ದು ಅವನಿಗೆ ದೇಖರೇಕಿಮಾಡುವವರು ಯಾರೂ ಇಲ್ಲಾ ಅಂತಾ ವಿಪರೀತವಾಗಿ ಶೆರೆ ಕುಡಿಯುವ ಚಟವನ್ನು ಕಲೆತಿದ್ದು ನಂತರ ಅವನಿಗೆ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ 27-04-2021 ರಂದು 14-30 ಗಂಟೆಯ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷ ಸೇವನೆ ಮಾಡಿ ಉಪಚಾರಕ್ಕೆ ರಾಣೆಬೆನ್ನೂರ ಸರಕಾರಿ ಆಸ್ಪತ್ರೆಗೆ ಹೋಗುವ ಕಾಲಕ್ಕೆ ಮಾರ್ಗಮದ್ಯದಲ್ಲಿ ಮೃತ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 28-04-2021 06:16 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ