ಅಭಿಪ್ರಾಯ / ಸಲಹೆಗಳು

ಹಾವೇರಿ ಸಿ ಇ ಎನ್  ಪೊಲೀಸ್ ಠಾಣೆ ಅಪರಾಧ ಸಂಖ್ಯೆ:50/2021 ಕಲಂ: INFORMATION TECHNOLOGY ACT 2008 (U/s-66(C),66(D),67) IPC.

              ಯಾರೋ ಅನಾಮದೇಯ ವ್ಯಕ್ತಿ ದಿನಾಂಕ: 05-07-2021 ರಂದು ರಾತ್ರಿ ಸುಮಾರು 08-00 ಗಂಟೆಯಿಂದ ರಾತ್ರಿ 08-05 ಗಂಟೆಯ ನಡುವಿನ ಅವಧಿಯಲ್ಲಿ ಸಲಿಮಾ ಮಹಮದ್ರಪಿಕ್ ಕಡೂರ ಇವರ ಹೆಸರಿನಲ್ಲಿ , salim_a2524 (URL https://instagram.com/salim_a2524?Utm-medium=copy-link) ಎಂಬ ಫೇಕ್  ಇನ್ಸ್ಟಾಗ್ರಾಂ ಅಕೌಂಟ್ನ್ನು ಕ್ರಿಯೇಟ್ ಮಾಡಿ ಅದರಲ್ಲಿ ಕೆಟ್ಟದಾಗಿ, ಏನೇನೋ ವಿಷಯಗಳನ್ನು ನಮೂದಿಸಿ ಅಲ್ಲಲ್ಲಿ ಅಶ್ಲೀಲ ಪದಗಳನ್ನು ಬಳಸಿ, ಸಲಿಮಾ ಇವರೆ  ಚಾಟ್ ಮಾಡಿದಂತೆ ಪೋಸ್ಟ್ ಮಾಡುತ್ತಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಮುಂದುವರಿಸಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

              ಹೊಳಲಪ್ಪ ತುಳಜಪ್ಪ ಕಪಾಲಿ ವಯಾ: 63 ಸಾ|| ಕುರಸಾಪುರ  ಸುಮಾರು 05-06 ವರ್ಷಗಳ ಹಿಂದೆ ಕೆಲಸಕ್ಕೆ ಹೋದಲ್ಲಿ ಆಕಸ್ಮಿಕವಾಗಿ ಜೋಲಿ ತಪ್ಪಿ ಬಿದ್ದಿದ್ದು ಇದರಿಂದ ಅವರ ಬಲಗಾಲ ಚಪ್ಪಿಗೆ ಪೆಟ್ಟಾಗಿತ್ತು ಈ ಸಂಬಂದ  ಶಿಗ್ಗಾಂವ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಮೃತ್ಯುಂಜಯ್ಯ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದು ಅದಕ್ಕೆ ಆಪರೇಶನ ಆಗಿತ್ತು ಆವಾಗಿನಿಂದ ಕುಂಟುತ್ತಿದ್ದ ತನ್ನಗಿದ್ದ  ಕಾಲು ನೋವಿನ ಭಾದೆಯಿಂದ ಮನಸ್ಸಿಗೆ ಬೇಜಾರ ಮಾಡಿಕೊಂಡು ಮನೆಯಲ್ಲಿ ದಿನಾಂಕ : 11/07/2021 ರಂದು ಮುಂಜಾನೆ 11.00 ಗಂಟೆಯಿಂದ 12.00 ಗಂಟೆಯ ನಡುವಿನ ಅವದಿಯಲ್ಲಿ ತನ್ನಷ್ಟಕ್ಕೆ ತಾನೆ ಮನೆಯಲ್ಲಿ ಉರುಲು ಹಾಕಿಕೊಂಡು ಮರಣ ಹೊಂದಿದ್ದು ವಿನ: ಅವನ ಮರಣದಲ್ಲಿ ಬೇರೆ ಸಂಶಯ ಇರುವದಿಲ್ಲ ಅಂತಾ ಮೃತನ  ಹೆಂಡತಿ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:21/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ನಾಗಪ್ಪ ತಂದೆ ಭೀಮಪ್ಪ ಸುರಳೇಶ್ವರ ಸಾಃಚಿಕ್ಕೌಂಶಿ ತಾಃಹಾನಗಲ್ಲ ಈತನು ಈಗ ಸುಮಾರು 25 ವರ್ಷಗಳ ಹಿಂದೆ ತನ್ನ ಹೆಂಡತಿಯು ಒಂದು ಗಂಡು ಮಗುವಿಗೆ ಜನ್ಮ ನೀಡಿ ತೀರಿಕೊಂಡಿದ್ದು ಆಗ ಆ ಮಗುವನ್ನು ನಾಗಪ್ಪ ತನ್ನ ಅಣ್ಣನಾದ ಮುದಕಪ್ಪ ಸುರಳೇಶ್ವರ ಇವರಿಗೆ ಲಾಲನೆ ಪೋಷಣೆ ಮಾಡುವ ಸಲುವಾಗಿ  ಮಗುವನ್ನು ಕೊಟ್ಟು ತಾನು ಕಾಪಿಸೀಮೆ, ಹೊರನಾಡು ಮುಂತಾದ ಕಡೆಗೆ ಕೂಲಿಕೆಲಸಕ್ಕೆ ಅಂತಾ ಹೋಗಿ ಅಲ್ಲಿ ಮಾನಸಿಕಗೊಂಡು ವಿಪರೀತವಾಗಿ ಸರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದು ಇದರಿಂದ ತನಗೆ ತುಂಬಾ ತ್ರಾಸ್ ಆಗಿ ಹೊಟ್ಟೆನೋವು ಬರುತ್ತಿದ್ದರಿಂದ ಅಲ್ಲಿ ನೋಡುವವರು ಯಾರೂ ಇಲ್ಲವಾಯಿತು. ಆದ್ದರಿಂದ ಈಗ ಸುಮಾರು 03 ವರ್ಷಗಳ ಹಿಂದೆ ಊರಿಗೆ ಬಂದು ವರದಿಗಾರನ ಮನೆಯಲ್ಲಿಯೇ ಉಳಿದುಕೊಂಡಿದ್ದು ಆಗಾಗ ಮೃತನಿಗೆ ಹೊಟ್ಟೆ ನೋವು ಬಂದು ತುಂಬಾ ತ್ರಾಸ್ ಆಗುತ್ತಿದ್ದರಿಂದ ಮಾನಸಿಕಗೊಂಡು ದಿನಾಂಕಃ03/07/2021 ರಂದು ಸಾಯಂಕಾಲಃ07-30 ಗಂಟೆಯಿಂದ ರಾತ್ರಿಃ08-00 ಗಂಟೆಯ ನಡುವಿನ ಅವಧಿಯಲ್ಲಿ ವರದಿಗಾರನ ಮನೆಯ ಹಿತ್ತಲಿನಲ್ಲಿ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವನೆ ಮಾಡಿದ್ದು ನಂತರ ಉಪಚಾರಕ್ಕೆ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿ ಉಪಚಾರ ಕೊಡಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರಕ್ಕೆ ದಾಖಲು ಮಾಡಿದ್ದು ಅಲ್ಲಿ ಉಪಚಾರದಲ್ಲಿದ್ದಾಗ ಉಪಚಾರ ಫಲಿಸದೇ ದಿನಾಂಕಃ10/07/2021 ರಂದು ರಾತ್ರಿಃ10-00 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ನನ್ನ ಅಣ್ಣನ ಸಾವಿನಲ್ಲಿ ಬೇರೆ ಏನೂ ಸಂಶಯವಿರುವುದಿಲ್ಲ ಅಂತಾ ಮೃತನ ಅಣ್ಣ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 16-07-2021 06:57 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080