ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:68/2021 ಕಲಂ: 379 IPC.

                   ದಿನಾಂಕ 01-07-2021 ರಂದು ಮುಂಜಾನೆ 11-00 ಗಂಟೆಗೆ ಮಾಹಿತಿ ಮೇರೆಗೆ ಗುತ್ತಲ ಪಿಎಸ್ ಐ ಹಾಗೂ ಸಿಬ್ಬಂದಿ ಜನರು ಸೇರಿ ಪಂಚರಿಗೆ ಕರೆದುಕೊಂಡು ಮೇವುಂಡಿ ಗ್ರಾಮದ ಸಮೀಪ ತುಂಗಬದ್ರಾ ನದಿಯ ಪಾತ್ರಕ್ಕೆ ಮದ್ಯಾಹ್ನ 12-00 ಗಂಟೆಗೆ ಹೋಗಿ ದಾಳಿ ಮಾಡಿದ ಕಾಲಕ್ಕೆ ನನ್ನೆಸಾಬ ನಧಾಪ ಹಾಗೂ ಸಹಚರರು ನದಿಯ ಪಾತ್ರದಲ್ಲಿಂದ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತೆಗೆದು ದಾಸ್ತಾನು ಮಾಡುತ್ತಿದ್ದು ಪೊಲೀಸ್ ಜೀಪನ್ನು ನೋಡಿ ಓಡಿ ಹೋಗಿದ್ದು ಇರುತ್ತದೆ. ದಾಳಿ ಮಾಡಿದ ಕಾಲಕ್ಕೆ ಒಂದು ಟ್ರ್ಯಾಕ್ಟರ (ಸುಮಾರು 2 ಕ್ಯೂಬಿಕ ಮೀಟರ) ನಷ್ಟು ಮರಳು ಅಕಿ 1800 ರೂ/- ವಶ ಪಡಿಸಿಕೊಂಡಿದ್ದು ಕಾನೂನು ರಿತ್ಯ ಕ್ರಮ ಜರುಗಿಸಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:88/2021 ವ್ಯಕ್ತಿ ಕಾಣೆ.

                   ಕರಿಯಪ್ಪ ತಂದೆ ತಿರಕಪ್ಪ ಉಪ್ಪಾರ ವಯಾ52 ವರ್ಷ ಜಾತಿ: ಹಿಂದೂ ಉಪ್ಪಾರ ಉದ್ಯೋಗ: ಒಕ್ಕಲುತನ ಸಾ: ಬೆನಕನಕೊಂಡ ತಾ:ರಾಣೇಬೆನ್ನೂರ ಇವರು  ದಿನಾಂಕ: 08-05-2021 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಬೆನಕನಕೊಂಡ ಗ್ರಾಮದ ಮನೆಯಿಂದ  ಯಾರಿಗೂ ಕೇಳದೆ ಹೇಳದೆ  ಎಲ್ಲಿಯೋ ಹೋಗಿ ಕಾಣೆಯಾಗಿದ್ದು. ಸದರಿ  ಕಾಣೆಯಾದವರ  ಚಹರೆಃ ಎತ್ತರ  5 ಅಡಿ 4 ಇಂಚುಚೌಕು ಮುಖ, ಸಾಧಾರಣ ಮೈ ಕಟ್ಟು, ಸಾದಗಪ್ಪು ಮೈಬಣ್ಣ, ನೀಟಾದ   ಮೂಗು, ತಲೆಯಲ್ಲಿ ಕಪ್ಪು ಮಿಶ್ರಿತ ಬಿಳಿ ಕೂದಲು ಇರುತ್ತವೆಬಲಗಣ್ಣಿನ ಮೇಲೆ ಹಳೆಯ ಮಾದ ಗಾಯದ ಕಲೆ ಅದೆ. ಬಟ್ಟೆಗಳು: ಮನೆಯಿಂದ ಹೋಗುವಾಗ  ನೀಲಿ ಬನಿಯನ್ ಹಾಗೂ ಪಟ್ಟಾಪಟ್ಟಿ ಕಪ್ಪು ಗೀರಿನ ಪಂಚೆ ದರಿಸಿರುತ್ತಾರೆ ಮಾತನಾಡುವ ಭಾಷೆ: ಕನ್ನಡ ಬಾಷೆ ಮಾತನಾಡುತ್ತಾರೆ. ಆಧಾರ್ ಕಾರ್ಡ ನಂ: 890548432687 ಈ ರೀತಿ ಚಹರೆಪಟ್ಟಿಯುಳ್ಳ ಕರಿಯಪ್ಪ ತಂದೆ ತಿರಕಪ್ಪ ಉಪ್ಪಾರ  ಇವರನ್ನು ಹುಡುಕಿಕೊಡಲು ವಿನಂತಿ ಅಂತಾ ಕಾಣೆಯಾದವನ ಪತ್ನಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:90/2021 ಮಹಿಳೆ ಕಾಣೆ.

                   ಕುಮಾರಿ: ಅನುಷಾ ತಂದೆ ರಂಗನಾಥ @ ರಂಗಪ್ಪ ತೆಲಗರ ವಯಾ: 17 ವರ್ಷ 03 ತಿಂಗಳು ದಿನಾಂಕ : 30-06-2021 ರಂದು ರಾತ್ರಿ 10.30 ಗಂಟೆಯಿಂದ ದಿನಾಂಕ : 01-07-2021 ರ ಬೆಳಗಿನ ಜಾವ 02.00 ಗಂಟೆಯ ನಡುವಿನ ಅವದಿಯಲ್ಲಿ ತಮ್ಮ ಮನೆಯವರೊಂದಿಗೆ ಊಟ ಮಾಡಿ ಮಲಗಿಕೊಂಡಿದ್ದು ನಂತರ ನಾನು ಬೆಳಗಿನ 02.00 ಗಂಟೆಗೆ ಸುಮಾರು ಮೂತ್ರ ಮಾಡಲು ಎದ್ದಾಗ ತನ್ನ ಪಕ್ಕದಲ್ಲಿ ಮಲಗಿದ್ದ ನನ್ನ ಮಗಳು ಇರಲಿಲ್ಲಾ ನಂತರ ನಾನು ಟಾಯಲಟ ರೂಂನಲ್ಲಿ ಹುಡುಕಾಡಿ ನಂತರ ನನ್ನ ಗಂಡನ್ನು ಎಬ್ಬಿಸಿ ಅವನಿಗೆ ವಿಷಯ ತಿಳಿಸಿದ್ದು ನಂತರ ತಮಗೆ ತಿಳಿದ ಎಲ್ಲಾಕಡೆಯೂ ಹುಡುಕಾಡಿದ್ದು ಎಲ್ಲಿಯೂ ಪತ್ತೇಯಾಗಿರುವದಿಲ್ಲಾ ಅವಳನ್ನು ಹಾನಗಲ್ಲ ತಾಲೂಕಿನ ಗಿರಿಶೀನಕೊಪ್ಪ  ಗ್ರಾಮದ ಸಂತೋಷ ತಂದೆ ನಾರಾಯಣಪ್ಪ ತಹಶೀಲ್ದಾರ ಈತನು ಅವಳನ್ನು ಅಪಹರಸಿಕೊಂಡು ಹೋಗಿರಬಹುದು ಅಂತಾ ಸಂಶಯವಿದೆ, ಅವಳನ್ನು ಪತ್ತೇ ಮಾಡಿಕೊಡಬೇಕೆಂದು ಕಾಣೆಯಾದವಳ ತಾಯಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:17/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ಷಣ್ಮುಖ ತಂದೆ ಬಸವರಾಜಪ್ಪ ಯರೇಶಿಮಿ ವಯಾ: 22 ವರ್ಷ, ಜಾತಿ: ಹಿಂದೂ ಲಿಂಗಾಯತ, ಉದ್ಯೋಗ: ವ್ಯವಸಾಯ ಸಾ: ಗುಡ್ಡದಹೊಸಹಳ್ಳಿ ಇವನು ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ದಿನಾಂಕ: 30-06-2021 ರಂದು 22-30 ಗಂಟೆಯಿಂದ 30-06-2021 ರಂದು 23-45 ಗಂಟೆಯ ನಡುವಿನ ಅವದಿಯಲ್ಲಿ ಸಾರಾಯಿ ಕುಡಿದ ಅಮಲಿನಲ್ಲಿ ತನ್ನಷ್ಟಕ್ಕೆ ತಾನೇ ತಮ್ಮ ದನದ ಮನೆಯಲ್ಲಿದ್ದ ಬೆಳಗಳಿಗೆ ಹೊಡೆಯುವ ಕ್ರಿಮಿನಾಶಕ ಎಣ್ಣೆಯನ್ನು ಕುಡಿದು ಅಸ್ವಸ್ಥನಾದಾಗ ಅವನಿಗೆ ಉಪಚಾರಕ್ಕೆ ಬ್ಯಾಡಿಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದಾಗ ದಿನಾಂಕ:01-07-2021 ರಂದು  ಬೆಳಗಿನ ಜಾವ 00-05 ಗಂಟೆ ಸುಮಾರಿಗೆ ಉಪಚಾರ ಪಲಿಸದೆ ಮರಣ ಹೊಂದಿದ್ದು ಇರುತ್ತದೆ. ಇವನ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ  ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:20/2021  ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ಶ್ರೀ. ಸುಭಾಷ ತಂದೆ ಅರ್ಜಪ್ಪ ವೀರಾಪೂರ  ವಯಾ:65 ವರ್ಷ ಜ್ಯಾತಿ: ಜೈನ್ ದಿಗಂಬರ ಉದ್ಯೋಗ: ಒಕ್ಕಲುತನ ಸಾ:ನಿಟಗಿನಕೊಪ್ಪ  ತಾ: ಹಾನಗಲ್ಲ  ಇವರು ತಮ್ಮ ಬಾಬತ್ತ ನಿಟಗಿನಕೊಪ್ಪ ಹದ್ದಿ ರಿ..ನಂ:68/13 ನೇ ಜಮೀನದಲ್ಲಿ ಬೆಳೆದ ಸೋಯಾಬಿನ್ ಬೆಳೆಯನ್ನು ನೋಡಲು  ಹೋದಾಗ ದಿನಾಂಕ:01/07/2021 ರಂದು ಮುಂಜಾನೆ 08-00 ಗಂಟೆಯಿಂದ ಮುಂಜಾನೆ:10-30 ಗಂಟೆಯ ನಡುವಿನ ಅವಧಿಯಲ್ಲಿ ಸೋಯಾಬಿನ್ ಬೆಳೆ ಸರಿಯಾಗಿ ಹುಟ್ಟದೇ ಇರುವುದನ್ನು ನೋಡಿ ಮನಸ್ಸಿಗೆ ಬೇಜಾರು ಮಾಡಿಕೊಂಡು ತನ್ನಷ್ಟಕ್ಕೆ ತಾನೇ ಜಮೀನದ ಬೋರ ಮನೆಯಲ್ಲಿ ಇಟ್ಟಿದ್ದ ಯಾವುದೋ ಕ್ರಿಮಿನಾಶಕ ಎಣ್ಣಿಯನ್ನು ಕುಡಿದಿದ್ದು ಅವರಿಗೆ ಹಾನಗಲ್ಲ ಸರಕಾರಿ ಆಸ್ಪತ್ರೆಗೆ ಕರದುಕೊಂಡು ಬಂದು ಉಪಚಾರಕ್ಕೆ ದಾಖಲಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕೀಮ್ಸ ಆಸ್ಪ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಬಂಕಾಪೂರ ಸಮೀಪ ಇರುವಾಗ ಮದ್ಯಾಹ್ನ 12-20 ಗಂಟೆಗೆ  ಮರಣ ಹೊಂದಿದ್ದು ಅವರ ಮರಣದಲ್ಲಿ  ಬೇರೆ ಸಂಶಯ ಇರುವುದಿಲ್ಲ ಅಂತಾ  ಮೃತನ ತಂದೆ ನೀಡಿದ ವರದಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 09-07-2021 06:54 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ