ಅಭಿಪ್ರಾಯ / ಸಲಹೆಗಳು

ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:40/2021 ಕಲಂ:PROTECTION OF CHILDREN FROM SEXUAL OFFENCES ACT 2012 (U/s-12) ;354(A),511)IPC.

            ಹೊನ್ನಪ್ಪ ಬಸಪ್ಪ ಸಿದ್ದಣ್ಣನವರ ವಯಾ: 27 ಸಾ:ನೆಗಳೂರ ಇವನು ದಿನಾಂಕ;28-06-2021 ರಂದು ಮದ್ಯಾಹ್ನ 12-00 ಗಂಟೆಗೆ ಸುಮಾ ತಂದೆ ನಾಗರಾಜ ಸಿದ್ದಣ್ಣನವರ  ವಯಾ-9 ವರ್ಷ ಇವಳು ನೀರು ತರಲು ಹೋದಾಗ ಹೊನ್ನಪ್ಪ ರೇಷನ್ ತರಲು ಹೋಗೋಣ ಬಾ ಅಂತಾ ಹೇಳಿ ತನ್ನ ಬೈಕ ಮೇಲೆ ಹತ್ತಿಸಿಕೊಂಡು ಮಸೂತಿ ಹತ್ತಿರ ಹೋಗಿ ಸ್ವಲ್ಪ ದೂರು ಕರೆದುಕೊಂಡು ಹೋಗಿ ಅಂಗಿ ಚಡ್ಡಿಯನ್ನು ತೆಗಿ ಅಂತಾ ಹೇಳಿದನು, ಚಡ್ಡಿಯನ್ನು ತೆಗೆದು ಅಲ್ಲೆ ಒಗೆದು ಒಂದ ಮಾಡುವ ಜಾಗಕ್ಕೆ ಮುಟ್ಟಿದನು ಆಗ ಸುಮಾ ಇವಳು ಚಿರುತ್ತಿರುವಾಗ ಇವಳು ಅಪ್ರಾಪ್ತ ವಯಸ್ಸಿನವಳು ಅಂತಾ ಗೊತ್ತಿದ್ದರೂ ಸಹ  ಮರ್ಯಾದೆಗೆ ಧಕ್ಕೆ ಬರುವಂತೆ ಪ್ರಯತ್ನ ಮಾಡಿ ಓಡಿ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗುತ್ತಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:67/2021 ಕಲಂ:379 IPC.

            ದಿನಾಂಕ 28-06-2021 ರಂದು ಮಧ್ಯಾಹ್ನ 02-00 ಗಂಟೆಗೆ ಮಹಿತಿ ಮೇರೆಗೆ ಪಿಎಸ್ಐ ಹಾಗೂ ಸಿಬ್ಬಂದಿ ಜನರು ಸೇರಿ ಹಾಗೂ ಪಂಚರಿಗೆ ಕರೆದುಕೊಂಡು ಹರಳಹಳ್ಳಿ ಗ್ರಾಮದ ಸಮೀಪ ತುಂಗಬದ್ರಾ ನದಿಯ ಪಾತ್ರಕ್ಕೆ ಮದ್ಯಾಹ್ನ 03-00 ಗಂಟೆಗೆ ಹೋಗಿ ದಾಳಿ ಮಾಡಿದ ಕಾಲಕ್ಕೆ ನಾಗಪ್ಪ ದೇವಿಂದ್ರಪ್ಪ ಗೊಂದಿ ಇವನು ನದಿಯ ಪಾತ್ರದಲ್ಲಿಂದ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತೆಗೆದು ದಾಸ್ತಾನು ಮಾಡಿದ್ದು. ದಾಳಿ ಮಾಡಿದ ಕಾಲಕ್ಕೆ ಒಂದು ಟ್ರ್ಯಾಕ್ಟರ (ಸುಮಾರು 2 ಕ್ಯೂಬಿಕ ಮೀಟರ) ನಷ್ಟು ಮರಳು ಅಕಿ 1800 ರೂ/- ವಶ ಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:112/2021 ಕಲಂ: 380,454,457 IPC.

            ಹಾನಗಲ್ಲ ಪೊಲೀಸ ಠಾಣೆಯ ಹದ್ದಿ ಪೈಕಿ ಹಾನಗಲ್ಲ ಶಹರದ ಕನಕ ಸರ್ಕಲದಲ್ಲಿ ಇರುವ ಸಿಟಿ ಮೆಡಿಕಲ್ಸ ಔಷಧಿ ಅಂಗಡಿಯಲ್ಲಿ ದಿನಾಂಕ; 27-06-2021 ರಂದು ರಾತ್ರಿ 10-30 ಘಂಟೆಯಿಂದ ದಿನಾಂಕ; 28-06-2021 ರಂದು ಬೆಳಿಗ್ಗೆ 08-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸಿಟಿ ಮೆಡಿಕಲ್ಸ ಎಂಬ ಹೆಸರಿನ ಅಂಗಡಿಯ ಶೆಟರ್ಸಗೆ ಹಾಕಿದ್ದ ಕೀಲಿಯನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳಗಡೆ ಬಂದು ಕ್ಯಾಶ ಕೌಂಟರದ ಡ್ರಾದಲ್ಲಿ ಇಟ್ಟಿದ್ದ 42,000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:14/2021 ಮಗು ಸಾವು.

            ತನ್ವಿತ ತಂದೆ ಮಲ್ಲಿಕಾರ್ಜುನ ವಾಲ್ಮಿಕಿ, ವಯಾ: 11 ತಿಂಗಳು, ಸಾ: ಹಂಸಭಾವಿ, ತಾ: ಹಿರೇಕೆರೂರ, ಈತನು ದಿನಾಂಕ: 28-06-2021 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ವರದಿಗಾರನ ಮನೆಯ ಹಿತ್ತಲ ಜಾಗೇಯಲ್ಲಿ ತೆಂಗಿನ ಮರದ ಕೇಳಗೆ ಆಟ ಆಡುತ್ತಿರುವಾಗ ತೆಂಗಿನ ಮರದ ಮೆಲಿಂದ ತೆಂಗಿನ ಕಾಯಿಯು ಆಟ ಆಡುತ್ತಿದ ಪಾಪುವಿನ ತೆಲೆಯ ಮೇಲೆ ಆಕಸ್ಮಿಕವಾಗಿ ಬಿದ್ದಿದ್ದು ನಂತರ ಉಪಚಾರಕ್ಕೆ ಅಂತಾ ರಾಣೆಬೆನ್ನೂರಿನ ಕನ್ನೂರು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ದಾವಣಗೆರಿಯ ಎಸ್ ಎಸ್ ಆಸ್ಪತ್ರೆಗೆ ದಾಖಲೂ ಮಾಡಿ ಉಪಚಾರ ಪಡಿಸುತ್ತಿದ್ದಾಗ ಉಪಚಾರ ಪಲಿಸದೆ ಮಗು ಮೃತ ಪಟ್ಟಿದ್ದು ತನ್ನ ಮಗುವಿನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮೃತ ಮಗುವಿನ ತಂದೆ ಮಲ್ಲಿಕಾರ್ಜುನ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 04-07-2021 11:23 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ