ಅಭಿಪ್ರಾಯ / ಸಲಹೆಗಳು

ಹಾವೇರಿ ಜಿಲ್ಲೆಯ ಬಗ್ಗೆ

ಹಾವೇರಿ ಜಿಲ್ಲೆಯ ಬಗ್ಗೆ                                   Click on Wikipedia https://en.wikipedia.org/wiki/Haveri

             ಹಾವೇರಿ ಜಿಲ್ಲೆಯು ಈ ಹಿಂದೆ ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿತ್ತು, ಜನರ ಬೇಡಿಕೆಯಿಂದಾಗಿ ಹಾವೇರಿ ಜಿಲ್ಲೆಯನ್ನು ಹಳೆಯ ಧಾರವಾಡ ಜಿಲ್ಲೆಯಿಂದ ಬೇರ್ಪಡಿಸಿ 1997 ರಲ್ಲಿ ಪ್ರತ್ತೇಕ ಹಾವೇರಿ ಜಿಲ್ಲೆಯಾಗಿ ಮಾರ್ಪಡಿಸಲಾಯಿತು. ನಂತರ ಜನರ ಸುರಕ್ಷತೆಯ ಸಲುವಾಗಿ ದಿನಾಂಕ: 24-08-1997 ರಂದು ಹಾವೇರಿ ಜಿಲ್ಲಾ ಪೊಲೀಸ್ ಅಸ್ತಿತ್ವಕ್ಕೆ ಬಂದು. ಹಾವೇರಿ ಜಿಲ್ಲಾ ಪೊಲೀಸ್ ಕಚೇರಿಯನ್ನು 08-02-2014 ರಂದು ಕೆರಿಮಟ್ಟಿಹಳ್ಳಿ ಗ್ರಾಮದಲ್ಲಿ ಉದ್ಘಾಟಿಸಲಾಯಿತುಇದು ಹಾವೇರಿ ಟೌನ್ ಪಶ್ಚಿಮ ದಿಕ್ಕಿನಿಂದ 06 ಕಿ.ಮೀ ದೂರದಲ್ಲಿದೆಆದರೆ ಕೆರೆಮತ್ತಿಹಳ್ಳಿಯ ಜಿಲ್ಲಾ ಪೊಲೀಸ್ ಕಛೇರಿಯಯ ಜನರ ಸಂಪರ್ಕಕ್ಕೆ ದೂರವೆನಿಸಿದ ಕಾರಣ ಪ್ರಸ್ತುತ ಹಾವೇರಿ ನಗರದ ಹಾವೇರಿಯ ಹಳೆಯ ಕೊರ್ಟನ್ನು ಹಾವೇರಿ ಜಿಲ್ಲಾ ಪೊಲೀಸ್ ಕಛೇರಿಯಾಗಿ ಮಾರ್ಪಾಡಿಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ.

         ಹಾವೇರಿ ಜಿಲ್ಲೆಯು ನಿಖರವಾಗಿ ಕರ್ನಾಟಕದ ಮಧ್ಯಭಾಗದಲ್ಲಿದ್ದು, ಉತ್ತರದಲ್ಲಿರುವ ಬೀದರ್‌ನಿಂದ ದಕ್ಷಿಣದ ಕೊಳ್ಳೆಗಾಲದವರೆಗೆ ಸಮಾನ ಅಂತರವಿದೆ. ಇದನ್ನು ಕರ್ನಾಟಕದ ಉತ್ತರ ಜಿಲ್ಲೆಗಳ ಗೇಟ್ ವೇ ಎಂದೂ ಕರೆಯುತ್ತಾರೆ.

        ಹಾವೇರಿ ಜಿಲ್ಲೆಯು ಅತ್ಯಂತ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ಶ್ರೇಷ್ಠ ಸಂತ ಕನಕದಾಸರು, ಸಂತ ಶಿಶುನಾಳ ಷರೀಪ್ ರವರ ಜನ್ಮಸ್ಥಳ ಎಂದು ಜಿಲ್ಲೆಯು ಹೆಮ್ಮೆಪಡುತ್ತದೆ. ಹಾಗೂ ಸರ್ವಜ್ಞ, ಹಾನಗಲ್ ಕುಮಾರ ಶಿವಯೋಗಿಗಳುಬರಹಗಾರ ಗಳಗನಾಥರುಗಾನಯೋಗಿ ಪಂಚಕ್ಷಾರಿ ಗವಾಯಿಗಳುಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೆ.ಗೋಕಾಕ್  ಈ ಎಲ್ಲ ಮಾಹಾ ವ್ಯಕ್ತಿಗಳು ನಮ್ಮ ಜಿಲ್ಲೆಯವರೆನ್ನಲು ಹಾವೇರಿಯ ಹೆಮ್ಮೆಯ ಸಂಗತಿಗಳಾಗಿವೆ.

              ಬ್ರಿಟಿಷ್ ಆಡಳಿತವನ್ನು ವಿರೋಧಿಸಿದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪ ಅವರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರ್ ಮೂಲದವರು ಹಾಗೂ ಹೊಸರಿತ್ತಿ ಮೂಲದ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಗುಡ್ಲೆಪ್ಪ ಹಳ್ಳಿಕೆರೆ ಕೂಡ ಈ ಜಿಲ್ಲೆಯವರು. ಅವರು ಹೊಸರಿತ್ತಿಯಲ್ಲಿ ಗಾಂಧಿ ಗ್ರಾಮೀಣ ಗುರುಕುಲ್ ಎಂಬ ವಸತಿ ಶಾಲೆಯನ್ನು ಪ್ರಾರಂಭಿಸಿದರು.

ಕೃಷಿ ಜಿಲ್ಲೆಯ ಪ್ರಮುಖ ಉದ್ಯ್ದೊಗವಾಗಿದ್ದು, ಜಿಲ್ಲೆಯ ಭೌಗೋಳಿಕ ಪ್ರದೇಶದ 4,85,000 ಹೆಕ್ಟೇರ್ ಪ್ರದೇಶದಲ್ಲಿ 3,60,030 ಹೆಕ್ಟೇರ್ ಕೃಷಿ ಚಟುವಟಿಕೆ ಒಳಗೊಂಡಿದೆ,.

ಇಲ್ಲಿ ಜೋಳ, ಹತ್ತಿ, ಅಕ್ಕಿ, ಮೆಣಸಿನಕಾಯಿ, ನೆಲಗಡಲೆ, ಸೂರ್ಯಕಾಂತಿ, ಕಬ್ಬು ಮತ್ತು ಎಣ್ಣೆಕಾಳುಗಳು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ.

ವರದಾ, ಕುಮಧ್ವತಿ, ಧರ್ಮಾ ಮತ್ತು ತುಂಗಭದ್ರಾ ಜಿಲ್ಲೆಯ ಪ್ರಮುಖ ನದಿಗಳಾಗಿವೆ. ಮರಳು ಮತ್ತು ಕಟ್ಟಡದ ಕಲ್ಲುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಖನಿಜ ಅದಿರುಗಳು ಜಿಲ್ಲೆಯಲ್ಲಿ ಕಂಡುಬರುವುದಿಲ್ಲ.

 

ಕ್ರಂ.ಸಂ

ವಿವರಣೆ

ಘಟಕಗಳು

ಹಾವೇರಿ ಜಲ್ಲೆ

1

ಒಟ್ಟು ಜನಸಂಖ್ಯೆ

No.s

1597668

2

ಒಟ್ಟು ಜನಸಾಂದ್ರತೆ

No.s

330

3

ಗ್ರಾಮೀಣ ಜನಸಂಖ್ಯೆ

No.s

1242167

4

ನಗರ ಜನಸಂಖ್ಯೆ

No.s

355501

5

ಒಟ್ಟು ಕಾರ್ಮೀಕರ ಸಂಖ್ಯೆ

No.s

730066

6

ಸಾಗುವುಳಿದಾರರ ಸಂಖ್ಯೆ

No.s

189916

7

ಭೂಗೋಳಿಕ ಪ್ರದೇಶ

Hectares

485156

8

ಅರಣ್ಯ ಪ್ರದೇಶ

Hectares

47454

9

ಬಿತ್ತನೆ ಪ್ರದೇಶ

Hectares

381162

10

ಒಟ್ಟು ಬಿತ್ತನೆ ಪ್ರದೇಶ

Hectares

424618

11

ನೀರಾವರಿ ಪ್ರದೇಶ

Hectares

111513

12

ಬ್ಯಾಂಕುಗಳ ಸಂಖ್ಯೆ

No.s

172

13

ಸಹಕಾರಿ ಸಂಘಗಳು

No.s

993

14

ಒಟ್ಟು ಮೋಟಾರು ಸಂಖ್ಯೆಗಳು

No.s

181225

15

ಅಂಚೆ ಕಛೇರಿಗಳು

No.s

260

16

ಆಧಾಯ

Lakh Rupees

526159

17

ತಲಾ ಆದಾಯ

Rupees

32656

18

ಪ್ರಾಥಮಿಕ ಶಾಲೆಗಳು

No.s

1454

19

ಪ್ರೌಡಶಾಲೆಗಳು

No.s

370

20

ಸರ್ಕಾರಿ ದವಾಖಾನೆಗಳು

No.s

78

       

21

ನ್ಯಾಯ ಯೋಚಿತ ಪ್ರದೇಶಗಳು

No.s

463

 

ರೈಲು ಟ್ರ್ಯಾಕ್ರೈಲು ಮಾರ್ಗದ ಉದ್ದ -99 ಕಿ.ಮೀ.ರಸ್ತೆಗಳುರಾಷ್ಟ್ರೀಯ ಹೆದ್ದಾರಿ -103 ಕಿ.ಮೀ ರಾಜ್ಯ ಹೆದ್ದಾರಿ - 587 ಕಿ.ಮೀ ಮುಖ್ಯ ಜಿಲ್ಲೆ ಹೆದ್ದಾರಿ -1843 ಕಿ.ಮೀ.

ಜನಸಂಖ್ಯಾ ವಿವರಣೆ.

ಭೂಪ್ರದೇಶ:4,85,156 ಹೇಕ್ಟರಗಳು

ಜನಸಂಖ್ಯೆ :

                  ಪುರುಷ: - 8,19,128

                  ಮಹಿಳೆ: - 7,78,540

                  ಒಟ್ಟು: 15,97,668

ನದಿಗಳು : ತುಂಗಭದ್ರಾ, ವರದಾ, ಕುಮುದ್ವತಿ, ಧರ್ಮಾ.

 ರಾಷ್ಟ್ರೀಯ ಹೇದ್ದಾರಿಗಳು: ಕುಮಾರಪಟ್ಟಣದಿಂದ ತಡಸದ ವರೆಗೂ 103 ಕಿ.ಮೀ ರಾಷ್ಟ್ರೀಯ ಹೇದ್ದಾರಿ

ಐತಿಹಾಸಿಕ ಸ್ಥಲಗಳು: ಕಾಗಿನೇಲೆ ಕನಕ ಪೀಠ, ಶ್ರೀ ಶಿಶುನಾಳ ಶರೀಪರ ಗದ್ದುಗೆ, ಬಾಡಾ ಕನಕದಾಸರ ಜನ್ಮ ಸ್ಥಳ, ಹಾನಗಲ್ಲಿನ ತಾರಕೇಶ್ವರ ದೇವಸ್ಥಾನ, ದೇವರ ಗುಡ್ಡ.

ಕಾರ್ಖಾನೆಗಳು: ಸಂಗೂರ ಸಕ್ಕೆರೆ ಕಾರ್ಖಾನೆ, ಗ್ರಾಸಿಮ್ ಕಾರ್ಖಾನೆ ಕುಮಾರಪಟ್ಟಣ, ಅಂಬುಜಾ    ಮೇಕ್ಕೆಜೋಳದ  ಕಾರ್ಖಾನೆ ಶಿಗ್ಗಾವಿ.

ಹಾವೇರಿ ಜಿಲ್ಲೆಯ 08 ತಾಲೂಕುಗಳು.

 1. ಹಾವೇರಿ
 2. ಹಾನಗಲ್ಲ
 3. ಬ್ಯಾಡಗಿ
 4. ರಾಣೆಬೇನ್ನೂರ
 5. ಶಿಗ್ಗಾವಿ
 6. ಹಿರೆಕೇರೂರ
 7. ಸವಣೂರ
 8. ರಟ್ಟಿಹಳ್ಳಿ

ಮುಖ್ಯವಾದ ವಾಣಿಜ್ಯ ನಗರಗಳು.

 ಹಾವೇರಿ: ಏಲಕ್ಕಿ ಮಾರುಕಟ್ಟೆ.

 ರಾಣೆಬೇನ್ನೂರ: ಹತ್ತಿ ಮತ್ತು ಮೇಕ್ಕೆಜೋಳ ಮಾರುಕಟ್ಟೆ.

 ಬ್ಯಾಡಗಿ: ಅಂತರಾಷ್ಟ್ರೀಯ ಮೇಣಸಿನಕಾಯಿ ಮಾರುಕಟ್ಟೆ.

 ಶಿಗ್ಗಾವಿ : ವಿಂಡ ಮಿಲ್ಸ್.

ಗಡಿ ಜಿಲ್ಲೆಗಳು.

 1. ದಾವಣಗೇರೆ, 2. ಶಿವಮೊಗ್ಗ. 3.ಕಾರವಾ, 4. ಧಾರವಾಡ, 5.ಗದಗ, 6.ಬಳ್ಳಾರಿ.

ಇತ್ತೀಚಿನ ನವೀಕರಣ​ : 03-11-2020 06:09 PM ಅನುಮೋದಕರು: System Admin Haveri

ಇತ್ತೀಚಿನ ನವೀಕರಣ​ : 09-02-2021 01:09 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080